ಮಾಯಾ ಬೂಟ್ ಪಾಲಿಶ್ : ವಿಪಕ್ಷಗಳ ಆಕ್ರೋಶ
ಆರೈಯಾ
(ಯು.ಪಿ), ಫೆ. 8 : ಉತ್ತರ ಪ್ರದೇಶ ಮುಖ್ಯಮಂತ್ರಿಗೆ ನಿಯೋಜಿತವಾಗಿರುವ ಭದ್ರತಾ ಸಿಬ್ಬಂದಿಗಳು ಮಾಯಾವತಿ ಅವರ ಪಾದರಕ್ಷೆಯನ್ನು ಸ್ವಚ್ಛಗೊಳಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇಲ್ಲಿನ ಜಿಲ್ಲಾ ಹೆಲಿಪ್ಯಾಡ್ ನಲ್ಲಿ ಮಾಯಾ ಇಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳು ಆಕೆಯ ಪಾದರಕ್ಷೆಯನ್ನು ಶುಭ್ರಗೊಳಿಸುತ್ತಿದ್ದನ್ನು ಹೆಡ್ ಲೈನ್ ಟುಡೇ ವಾಹಿನಿ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದೆ. id="toptextpromo">ಮಾಯಾ
ಇಳಿಯುತ್ತಲೇ ಭದ್ರತಾ ಸಿಬ್ಬಂದಿ ತನ್ನ ಕೈವಸ್ತ್ರದಿಂದ ಮಾಯಾ ಬೂಟ್ ಪಾಲಿಶ್ ಮಾಡುತ್ತಿದ್ದರೆ ಇನ್ನೊಬ್ಬ ಅಧಿಕಾರಿ, ಸಿಬ್ಬಂದಿ ಈ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾನೆಯೇ ಎಂದು ಗಮನಿಸುತ್ತಿದ್ದ. ಇದಕ್ಕೆ ಪ್ರತಿಕ್ರಿಯಿಸದ ಮಾಯಾ ತನ್ನ ಪಾಡಿಗೆ ಅಧಿಕಾರಿಗಳ ಜೊತೆ ಮಾತುಕತೆಯಲ್ಲಿ ನಿರತರಾಗಿದ್ದರು. id='are-slot-1' class='oiad oi-axt oiadv'> id='top-searched-articles'>ಈ
ಘಟನೆಗೆ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಮಾಯಾವತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಭದ್ರತಾ ಸಿಬ್ಬಂದಿಗಳನ್ನು ಮಾಯಾ ತಡೆಯಬೇಕಾಗಿತ್ತು. ಈ ವರ್ತನೆಯಿಂದಾಗಿ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿಕೆ ನೀಡಿವೆ.











Click it and Unblock the Notifications