ನಮ್ಮ ಮೆಟ್ರೋ ಪ್ರಯಾಣ ದರ ಪ್ರಕಟ

Namma Metro Bangalore
ಬೆಂಗಳೂರು, ಜ. 30 : ಬೈಯಪ್ಪನಹಳ್ಳಿಯಿಂದ ಮಹಾತ್ಮಾ ಗಾಂಧಿ ರಸ್ತೆ ವರೆಗಿನ 6.7 ಕಿಮೀ ಉದ್ದದ ರೀಚ್‌-1ರ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ರೈಲಿನ ಪ್ರಯಾಣ ದರವನ್ನು ಬಿಎಂಆರ್ ಸಿಎಲ್‌ ಶನಿವಾರ ಘೋಷಿಸಿದೆ.

ರೀಚ್‌-1ರ ಪ್ರಯಾಣ ದರ ಕನಿಷ್ಠ 10 ರುಪಾಯಿ ಹಾಗೂ ಗರಿಷ್ಠ 15 ರುಪಾಯಿ ನಿಗದಿ ಮಾಡಲಾಗಿದೆ. ದೈನಿಕ ಹಾಗೂ ವಾರ್ಷಿಕ ಪಾಸ್‌ ವ್ಯವಸ್ಥೆಯೂ ಇರುತ್ತದೆ. ದೈನಿಕ ಪಾಸ್‌ ವ್ಯವಸ್ಥೆಯಲ್ಲಿ ಎಂಬಿಟಿ (ಮೆಟ್ರೋ ಮತ್ತು ಬಿಎಂಟಿಸಿ ಬಸ್ಸು ) ದರವನ್ನು 110 ರುಪಾಯಿಗೆ ನಿಗದಿ ಮಾಡಲಾಗಿದೆ. ಈ ಟಿಕೆಟ್‌ನಲ್ಲಿ ಇಡೀ ದಿನ ಎಷ್ಟು ಸಲ ಬೇಕಾದರೂ ಮೆಟ್ರೋ ರೈಲು ಹಾಗೂ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿದೆ.

ಮೆಟ್ರೋ ರೈಲಿನ ಜತೆ ಸಾಮಾನ್ಯ ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರ ದೈನಿಕ ಪಾಸ್‌ಗೆ 70 ರುಪಾಯಿ ಹಾಗೂ ಮೆಟ್ರೋ ಮತ್ತು ವೊಲ್ವೋ ( ವಿಮಾನ ನಿಲ್ದಾಣ ಸೇವೆ ಹೊರತುಪಡಿಸಿ) 110 ರುಪಾಯಿ ನಿಗದಿಯಾಗಿದೆ.

ಮೂರು ವಿಧದ ಟಿಕೆಟ್‌ಗಳು : ಸಿಎಸ್‌ಟಿ ( ಕಾಂಟೆಕ್ಟ್ ಸ್ಮಾಟ್‌ ಟೋಕನ್‌ ) ಟಿಕೆಟ್‌ ಖರೀದಿಸುವವರು ಒಂದು ಬಾರಿ ಮಾತ್ರ ಪ್ರಯಾಣಿಸಬಹುದು. ಈ ಟಿಕೆಟ್‌ ನ ಕನಿಷ್ಠ ದರ 10 ರುಪಾಯಿ ಆಗಿರುತ್ತದೆ. ಬೈಯಪ್ಪನಹಳ್ಳಿಯಿಂದ ಸ್ವಾಮಿ ವಿವೇಕಾನಂದ ರಸ್ತೆ ವರೆಗೆ 10 ರುಪಾಯಿ ಪಾವತಿಸಿ ಮೆಟ್ರೋದಲ್ಲಿ ಮಾತ್ರ ಪ್ರಯಾಣಿಸಬಹುದು. ಪ್ರತಿ ನಿಲ್ದಾಣಕ್ಕೂ ಹೆಚ್ಚುವರಿಯಾಗಿ 2 ರುಪಾಯಿ ದರ ಏರಿಸಲಾಗಿದೆ. ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆವರೆಗೆ ಒಂದು ಕಡೆ ಪ್ರಯಾಣಕ್ಕೆ 15 ರುಪಾಯಿ ಪಾವತಿಸಬೇಕಾಗುತ್ತದೆ.

ಬೈಯಪ್ಪನಹಳ್ಳಿ ನಿಲ್ದಾಣದಿಂದ ಹಲಸೂರು ನಿಲ್ದಾಣಕ್ಕೆ 12 ರುಪಾಯಿ, ಬೈಯಪ್ಪನಹಳ್ಳಿಯಿಂದ ಟ್ರಿನಿಟಿ ವೃತ್ತದ ವರೆಗೆ 14 ರೂ. ಪ್ರಯಾಣ ದರ ನಿಗದಿಯಾಗಿದೆ. ರೀಚ್‌ ಒಂದರಲ್ಲಿ ಆರು ನಿಲ್ದಾಣಗಳಿದ್ದು, ಯಾವ ನಿಲ್ದಾಣದಲ್ಲಿ ಪ್ರಯಾಣ ಆರಂಭಿಸಿದರೂ ಕನಿಷ್ಠ 10 ರುಪಾಯಿ ಟಿಕೆಟ್‌ ಖರೀದಿಸಬೇಕಾಗುತ್ತದೆ.

ಸಿಎಸ್‌ಸಿ ( ಕಾನ್‌ಟ್ಯಾಕ್ಟ್ ಲೆಸ್‌ ಸ್ಮಾರ್ಟ್‌ ಕಾರ್ಡ್‌) : ಇದರಲ್ಲಿ ಎರಡು ವಿಧದ ಟಿಕೆಟ್‌ ಇರುತ್ತದೆ. ವಾರ್ಷಿಕ ಮತ್ತು ಸಂಚಾರ್ ಟಿಕೆಟ್‌ಗಳನ್ನು ಪ್ರಯಾಣಿಕರು ಖರೀದಿಸಬಹುದು. ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು 50 ರುಪಾಯಿ ಕೊಟ್ಟು ಗುರುತಿನ ಚೀಟಿ ಖರೀದಿಸಬೇಕಾಗುತ್ತದೆ. ಇದನ್ನು ಖರೀದಿಸಿದ ನಂತರ ವಾರ್ಷಿಕ ಅಥವಾ ಸಂಚಾರ ಟಿಕಟ್‌ ಗಳಿಗೆ ಹಣ ಪಾವತಿಸಿ ಪಡೆಯಬಹುದಾಗಿದೆ.

ಸಂಚಾರ್‌ ಟಿಕೆಟ್‌ : ಖರೀದಿಸುವವರಿಗೆ ಟ್ರಿಪ್‌ ಗಳ ಆಧಾರದ ಮೇಲೆ ದರ ನಿಗದಿ ಮಾಡಲಾಗಿದೆ. 10 ಬಾರಿ ಪ್ರಯಾಣಿಸುವವರಿಗೆ ಕನಿಷ್ಠ 80 ರುಪಾಯಿ ಗರಿಷ್ಠ 120 ರುಪಾಯಿ ನಿಗದಿ ಮಾಡಲಾಗಿದೆ. ಅಂದರಲ್ಲಿ ಈ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಕನಿಷ್ಠ 20 ರೂ. ಹಾಗೂ ಗರಿಷ್ಠ 30 ರೂ. ರಿಯಾಯಿತಿ ದೊರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+