ವಿದ್ಯಾರ್ಥಿಗಳಿಗೆ ಎನ್ನಾರೆನ್ ಜತೆ ಕಲಿಕೆ ಅವಕಾಶ

YIF scholarship
ಇದು ಭಾರತದ ಅತ್ಯಂತ ಪ್ರತಿಭಾನ್ವಿತ 50 ಯುವ ಮನಸ್ಸುಗಳಿಗೆ ಅನನ್ಯವಾದ ಶೈಕ್ಷಣಿಕ ಅನುಭವದ ಭರವಸೆಯನ್ನು ನೀಡುವ ಸಂಪೂರ್ಣ ನಿಧಿ ಬೆಂಬಲಿತ ಶೈಕ್ಷಣಿಕ ಕಾರ್ಯಕ್ರಮ. ಇನ್ಫೋಸಿಸ್ ನ ಎನ್ ಆರ್ ನಾರಾಯಮೂರ್ತಿ, ಎಚ್ ಡಿಎಫ್ ಸಿಯ ದೀಪಕ್ ಪರೇಖ್, NIIT ರಾಜೇಂದ್ರ ಪವಾರ್, ಇತಿಹಾಸ ತಜ್ಞ ರಾಮಚಂದ್ರ ಗುಹಾ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರೊಡನೆ ವೈಯಕ್ತಿಕವಾಗಿ ಚರ್ಚಿಸುತ್ತಾ ಉನ್ನತ ಕಲಿಕೆಯನ್ನು ಮುಂದುವರೆಸುವ ಸದಾವಕಾಶ ಸಿಗುತ್ತದೆ.

ಭಾರತದ ಅತ್ಯಂತ ಯಶಸ್ವಿ ವೃತ್ತಿಪರರು ಮತ್ತು ಉದ್ಯಮಶೀಲರು ತನ್ನ ರೀತಿಯ ಮೊಟ್ಟಮೊದಲ ಬಹು ವಿಷಯಗಳ ಕಲಿಕಾ ಮತ್ತು ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ್ದಾರೆ. ಯಂಗ್ ಇಂಡಿಯಾ ಫೆಲೋಶಿಪ್(ವೈಐಎಫ್) ಎಂಬ ಹೆಸರಿನ ಈ ಕಾರ್ಯಕ್ರಮ ಸಾಮಾನ್ಯವಾದ ಇಂಜಿನಿಯರಿಂಗ್, ವಾಣಿಜ್ಯ ಅಥವ ವ್ಯವಹಾರ ಪಠ್ಯಕ್ರಮದಿಂದಾಚೆಗೆ ಆವಿಷ್ಕರಿಸಲು ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡುವುದರೊಂದಿಗೆ ಪ್ರಸ್ತುತ ಇರುವ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಗೆ ಸವಾಲು ಹಾಕುವ ಉದ್ದೇಶ ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಪೆನ್ಸಿಲ್‌ವೇನಿಯಾ ವಿಶ್ವ ವಿದ್ಯಾಲಯದ ಸುಮಾರು 12 ಮಂದಿ ಬೋಧನೆ ಮಾಡಲಿದ್ದಾರೆ. ತೆರೆದ ಮನಸ್ಸುಗಳನ್ನು ಸೃಷ್ಟಿಸುವುದು ಮತ್ತು ದೃಷ್ಟಿಕೋನವನ್ನು ನಿರ್ಮಿಸುವುದು ಮಾತ್ರವಲ್ಲದೆ ಈ ಫೆಲೋಶಿಪ್‌ನ್ನು ಸಮಸ್ಯೆ ಬಿಡಿಸುವ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸುವುದು (ಇದರಲ್ಲಿ ವೈಜ್ಞಾನಿಕ ಚಿಂತನೆ, ಇಂಜಿನಿಯರಿಂಗ್ ಮತ್ತು ಉದ್ಯಮ ವಿಶ್ಲೇಷಣೆ, ಲೇಖನ ಮತ್ತು ಸಂವಹನ, ಸಾಂಘಿಕ ಕಾರ್ಯ ಮತ್ತು ನಾಯಕತ್ವ ವಿಷಯಗಳು ಸೇರಿವೆ) ಸೇರಿದೆ. ವೈಐಎಫ್ ಭಾರತದ ಅತ್ಯಂತ ಪ್ರತಿಷ್ಠಾತ್ಮಕ ಫೆಲೋಶಿಪ್ ಕಾರ್ಯಕ್ರಮವಾಗುವ ವಿಶ್ವಾಸ ನಮಗಿದೆ ಎಂದು ಈ ಕಾರ್ಯಕ್ರಮದ ರುವಾರಿ ಪ್ರಮಥ್ ರಾಜ್ ಸಿನ್ಹಾ ಹೇಳುತ್ತಾರೆ.

ಯಾರು ಅರ್ಜಿ ಸಲ್ಲಿಸಬಹುದು?: ಈ ಕಾರ್ಯಕ್ರಮ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಮತ್ತು ಎರಡು ವರ್ಷಕ್ಕೂ ಕಡಿಮೆಯ ಕಾರ್ಯಾನುಭವ ಹೊಂದಿರುವ ಪದವಿಧರರಿಗೆ ತೆರೆದಿದೆ. ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಇಂಜಿನಿಯರ್‌ಗಳು, ವಿಜ್ಞಾನಿಗಳು, ಅಕೌಂಟೆಂಟ್‌ಗಳು ಮತ್ತು ವಕೀಲರು ಅಲ್ಲದೆ ಇತಿಹಾಸ, ಸಮಾಜಶಾಸ್ತ್ರ, ಸಾಹಿತ್ಯ ಅಥವ ಇತರೆ ಯಾವುದೇ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿಗಳು ಜನವರಿ 24, 2011ರಿಂದ ತೆರೆದಿವೆ. (ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ www.youngindiafellowship.comರಲ್ಲಿ ಸಂದರ್ಶಿಸಬಹುದು.) ತರಗತಿಗಳು ಮೇ 30, 2011ರಿಂದ ಆರಂಭವಾಗಲಿವೆ.

50 ಯಂಗ್ ಇಂಡಿಯಾ ಫೆಲೋಸ್‌ಗಳಲ್ಲಿ ಮೊದಲ ಬ್ಯಾಚ್‌ನ ಪ್ರತಿಯೊಬ್ಬರಿಗೂ 8 ಲಕ್ಷ ರೂ.ಗಳ ವಿದ್ಯಾರ್ಥಿವೇತನ ಲಭಿಸಲಿದ್ದು ಇದರಲ್ಲಿ ಶಿಕ್ಷಣ, ವಸತಿ, ಭೋಜನಗಳು ಸೇರಿವೆ. ಈ ಸ್ಕಾಲರ್‌ಶಿಪ್‌ಗಳನ್ನು ಮುಂಚೂಣಿಯ ವೃತ್ತಿಪರರ ಗುಂಪು ದಾನವಾಗಿ ನೀಡಿದ್ದು ಅವರು ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು ಈ ಕೊಡುಗೆ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ದಿಲ್ಲಿ ಎನ್‌ಸಿಆರ್‌ನ ಗುರ್‌ಗಾಂವ್‌ನಲ್ಲಿನ ಶೈಕ್ಷಣಿಕ ಸಂಸ್ಥೆ ಪ್ರದೇಶದಲ್ಲಿ ನಡೆಯಲಿದೆ. ಸಂಪೂರ್ಣ ವಸತಿ ಸ್ಥಳಾವಕಾಶ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗಾಗಿ ಅದೇ ಆವರಣದಲ್ಲಿ ನೀಡಲಾಗುವುದು.

ಅಶೋಕ ವಿಶ್ವವಿದ್ಯಾಲಯ: ಬೃಹತ್ ಜನೋಪಕಾರಿ ಯೋಜನೆಯಲ್ಲಿ ಯಂಗ್ ಇಂಡಿಯಾ ಫಿಲೋಶಿಪ್ ಮೊದಲ ಹೆಜ್ಜೆಯಾಗಿದ್ದು ಭಾರತದಲ್ಲಿ ವಿಶ್ವಮಟ್ಟದ ಅಶೋಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಯತ್ನದ ಮೊದಲ ಯತ್ನವಾಗಿದೆ. ಭಾರತದ ಯಶಸ್ವಿ ಉದ್ಯಮಶೀಲರು ಮತ್ತು ವೃತ್ತಿಪರರು ಈ ಪ್ರಯತ್ನ ನಡೆಸಿದ್ದು ಅಶೋಕ ಯುನಿವರ್ಸಿಟಿ ಅಂತಿಮವಾಗಿ ಬಹು ವಿಭಾಗಗಳ ತೆರೆದ ಶಿಕ್ಷಣ ಶೈಲಿಯದ್ದಾಗಿರುತ್ತದೆ.

ನಮ್ಮ ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ಕೊರತೆಯನ್ನು ತುಂಬುವತ್ತ ವೈಐಎಫ್ ಪ್ರಯತ್ನಿಸುತ್ತಿದೆ. ವೈಐಎಫ್ ಮತ್ತು ಅಶೋಕ ವಿಶ್ವವಿದ್ಯಾಲಯಕ್ಕೆ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಅಂತಾರಾಷ್ಟ್ರೀಯ ಪ್ರತಿಷ್ಠಾನ (ಐಎಫ್‌ಆರ್‌ಇ) ಬೆಂಬಲಿಸುತ್ತಿದೆ. [ವಿಶ್ವವಿದ್ಯಾಲಯ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+