ಡೆಲ್ 3ಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್

ನೂತನ ಡೆಲ್ 3ಜಿ ಆಂಡ್ರಾಯ್ಡ್, ಇತರ ಸ್ಮಾರ್ಟ್ ಫೋನ್ ಗಳಲ್ಲಿರುವ ಫೀಚರ್ ಗಳು ಮಾತ್ರವಲ್ಲದೇ ಹಲವು ನೂತನ ಫೀಚರ್ ಗಳಿವೆ. ಡೆಲ್ 3ಜಿ 2.8 ಇಂಚಿನ ಟಚ್ ಸ್ಕ್ರೀನ್, 3.2 ಮೆಗಾಫಿಕ್ಸೆಲ್ ಕ್ಲೀಯರ್ ಕ್ಯಾಮರಾ, ಬ್ಲೂಟೂಥ್, ವೈಫೈ ಕನೆಕ್ಷನ್, ಬ್ಲೂಟೂಥ್, 600 ಮೆಗಾಹರ್ಟ್ಜ್ ಪ್ರೊಸೆಸರ್, ಮ್ಯೂಸಿಕ್ ಪ್ಲೇಯರ್, ಎಂ ರೆಡಿಯೋ ಮತ್ತು ಆಂಡ್ರಾಯ್ಡ್ 2.1 ಒಎಸ್ ಇತ್ಯಾದಿ ಫೀಚರ್ ಗಳೊಂದಿಗೆ ಬಂದಿದೆ.
ಹೊಸ ಸ್ಮಾರ್ಟ್ ಫೋನ್ 3ಜಿ ಸೇವೆಗೆ ಸಪೋರ್ಟ್ ಮಾಡುವುದರಿಂದ ಬಳಕೆದಾರರಿಗೆ ಅತ್ಯುತ್ತಮ ಮೊಬೈಲ್ ಸರ್ಫಿಂಗ್ ಅನುಭವವಾಗಲಿದೆ. "ಕಂಪ್ಯೂಟರ್ ಸೇರಿದಂತೆ ಮೊಬೈಲ್ ಫೋನ್ ಗಳಿಗೆ ಭಾರತವು ಪ್ರಮುಖ ಮಾರುಕಟ್ಟೆ. ಹೀಗಾಗಿ ಇಲ್ಲಿ ನೂತನ ತಂತ್ರಜ್ಞಾನದ ಹ್ಯಾಂಡ್ ಸೆಟ್ ಗಳಿಗೆ ಅತ್ಯುತ್ತಮ ಬೇಡಿಕೆ ಇರುವುದಾಗಿ" ಡೆಲ್ ಉಪಾಧ್ಯಕ್ಷರು ಹೇಳಿದ್ದಾರೆ. ಆಂಡ್ರಾಯ್ಡ್ ಅಲ್ಲದೇ ಕಂಪನಿಯು 3ಜಿ ಸೌಲಭ್ಯವಿರುವ ಎಕ್ಸ್ ಸಿಡಿ 35 ಎಂಬ ಹ್ಯಾಂಡ್ ಸೆಟ್ ಕೂಡ ಹೊರತಂದಿದೆ. [ಮೊಬೈಲ್ ಫೋನ್]












Click it and Unblock the Notifications