ಅಶ್ಲೀಲ ವೆಬ್ ಸೈಟ್ ಗಳಿಗೆ ಬ್ಲಾಕ್ ಬೆರ್ರಿ ಕತ್ತರಿ
ಜಕಾರ್ತ,
ಜ. 24: ಕಪ್ಪು ಸುಂದರಿ ಬ್ಲಾಕ್ ಬೆರ್ರಿ ಮೊಬೈಲ್ ನಲ್ಲಿ ಇನ್ನು ಮುಂದೆ ಸೆಕ್ಸ್ ವೆಬ್ ಸೈಟ್ ನೋಡಲು ಸಾಧ್ಯವಿಲ್ಲ. ಹೆದರಬೇಡಿ, ಇದು ನಮ್ಮ ದೇಶದಲ್ಲಿ ಅಲ್ಲ. ಇಂಡೋನೇಷ್ಯಾದಲ್ಲಿ. ಅಲ್ಲಿನ ಸರಕಾರದ ಬೆದರಿಕೆಗೆ ಮಣಿದ ಬ್ಯಾಕ್ ಬೆರ್ರಿ ತಯಾರಿಕಾ ಕಂಪನಿ ರಿಮ್ ಸೆಕ್ಸ್ ಸೈಟ್ ಗಳನ್ನು ಬ್ಲಾಕ್ ಮಾಡಲು ನಿರ್ಧರಿಸಿದೆ. id="toptextpromo">ಇಂಡೋನೇಷ್ಯಾ
ಸರಕಾರ ಜನವರಿ 21ರ ಮೊದಲು ಇದನ್ನು ನಿಲ್ಲಿಸುವಂತೆ ಗಡವು ನೀಡಿದೆ. "ಅಲ್ಲಿನ ನಿಯಂತ್ರಣ ಪ್ರಾಧಿಕಾರದ ಸೂಚನೆಯಂತೆ ಪೊರ್ನ್ ವೆಬ್ ಸೈಟ್ ಗಳನ್ನು ಆಕ್ಸೆಸ್ ಮಾಡಲಾಗದಂತೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ' ಎಂದು ರಿಮ್(RIM) ವಕ್ತಾರರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>"ಇಂಡೋನೇಷ್ಯಾದ
ಮಾರುಕಟ್ಟೆಯಲ್ಲಿ ಕಂಪನಿಯು ಎಂದಿನಂತೆ ಹೂಡಿಕೆ ಮುಂದುವರೆಸಲಿದ್ದು ನಮ್ಮ ಗ್ರಾಹಕರ, ಪಾಲುದಾರರ ಆದ್ಯತೆ ಅವಶ್ಯಕತೆಗಳನ್ನು ಈಡೇರಿಸುವುದಾಗಿ' ಅವರು ಹೇಳಿದ್ದಾರೆ. ಆ ದೇಶದಲ್ಲಿ ಬ್ಲಾಕ್ ಬೆರ್ರಿ ಮೊಬೈಲ್ ನಲ್ಲಿ ಪ್ಲೇಬಾಯ್ ಡಾಟ್ ಕಾಮ್ ಇತ್ಯಾದಿ ವೆಬ್ ಸೈಟ್ ನೋಡುತ್ತಿದ್ದವರಿಗೆ ಇದರಿಂದ ತುಂಬಾ ಬೇಸರವಾಗಿರಬಹುದು. [ಮೊಬೈಲ್ ಫೋನ್]












Click it and Unblock the Notifications