ಬಳ್ಳಾರಿಯಲ್ಲಿ 30 ಲಕ್ಷ ರು. ಹಳೆ ನೋಟುಗಳಿಗೆ ಬೆಂಕಿ

ಶ್ರೀಮಠದ ಪಕ್ಕದಲ್ಲಿರುವ ಕೊಳವೆಭಾವಿಗೆ ನೇರವಾಗಿ ಮಠದ ಹಿಂಭಾಗದಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಅಪರಿಚಿತರು ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ಮತ್ತು ತಂಡ, ಅರೆಬೆರೆ ಸುಟ್ಟಿರುವ ನೋಟುಗಳು ಎಲ್ಲವೂ ನೈಜ ನೋಟುಗಳೇ ಆಗಿವೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಇದರಲ್ಲಿ 30 ಲಕ್ಷ ರು.ಯಷ್ಟು ಅಸಲಿ ನೋಟುಗಳು ಭಸ್ಮವಾಗಿರಬಹುದು ಎಂದು ಶಂಕಿಸಲಾಗಿದೆ.
ನೋಟುಗಳು ಹಳೆಯವಾಗಿದ್ದು ಬೂದು ಹಿಡಿದು ಕೆಟ್ಟ ವಾಸನೆ ಬರುತ್ತಿದ್ದವು. ಯಾರೋ ಈ ನೋಟುಗಳನ್ನು ಸುದೀರ್ಘ ಕಾಲ ಬಚ್ಚಿಟ್ಟುಕೊಂಡು ಅಜ್ಞಾನದಿಂದಾಗಿ ಕಾರಣ ಚಲಾವಣೆ ಮಾಡದೇ ಮೃತಪಟ್ಟಿರಬೇಕು. ಆ ಕುಟುಂಬದವರು ಅಥವಾ ಸಾರ್ವಜನಿಕರು ಈ ನೋಟುಗಳನ್ನು ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ದೊಡ್ಡ ಪ್ರಮಾಣದಲ್ಲಿಯೇ ಬಳ್ಳಾರಿ ನಗರ, ತೋರಣಗಲ್ಲು, ಸಂಡೂರು ನೆರೆಯ ಆಂಧ್ರದ ಗಡಿ ಗ್ರಾಮಗಳಲ್ಲಿ ನಕಲಿ ನೋಟುಗಳ ಚಲಾವಣೆ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರಿಗೆ ಮಾಹಿತಿ ನೀಡಿದರೂ ಕೂಡ ಅವರು ಶಿಸ್ತುಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. [ನಕಲಿ ನೋಟು]












Click it and Unblock the Notifications