ಐಪಿಎಲ್ 4 : ಗಂಗೂಲಿ ಕೈಹಿಡಿದ ಕೊಚ್ಚಿ ಫ್ರಾಂಚೈಸಿ?

Sourav Ganguly
ಮುಂಬೈ, ಜ. 21 : ಐಪಿಎಲ್ 4ನೇ ಆವೃತ್ತಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ತಿರಸ್ಕೃತಗೊಂಡಿರುವ ಮಾಜಿ ನಾಯಕ ಸೌರವ್ ಗಂಗೂಲಿ ಕೊಚ್ಚಿ ತಂಡದ ಪರವಾಗಿ ಆಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೊಚ್ಚಿ ಫ್ರಾಂಚೈಸಿ ಗಂಗೂಲಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಪ್ರವೇಶ ಪಡೆದಿರುವ ಕೊಚ್ಚಿ ತಂಡ ಯುವ ಆಟಗಾರರ ಜೊತೆಗೆ ಅನುಭವಿ ಆಟಗಾರರನ್ನೂ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇತ್ತೀಚೆಗೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸೌರವ್ ಗಂಗೂಲಿಯನ್ನು ಯಾವ ಫ್ರಾಂಚೈಸಿಗಳು ಖರೀದಿಸಿರಲಿಲ್ಲ. ಹತ್ತೂ ಫ್ರಾಂಚೈಸಿಗಳು ಸೌರವ್ ಗಂಗೂಲಿ ಅವರನ್ನು ನಿರ್ಲಕ್ಷಿಸಿದ್ದವು.

ಕಳೆದ ಮೂರು ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದ ದಾದಾ ಅವರನ್ನು ಈ ಸಲ ಶಾರೂಕ್ ಖಾನ್ ನೇತೃತ್ವದ ನೈಟ್ ರೈಡರ್ಸ್ ಕೈಬಿಟ್ಟಿತ್ತು. ಗಂಗೂಲಿಯನ್ನು ಖರೀದಸದೇ ಇರುವುದು ಕೊಲ್ಕತ್ತಾ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನೈಟ್ ರೈಡರ್ಸ್ ಮುಖ್ಯಸ್ಥ ಶಾರೂಕ್ ಖಾನ್ ಅವರ ಪ್ರತಿಕೃತಿಯನ್ನು ದಹಿಸಿ ಗಂಗೂಲಿಯನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒತ್ತಾಯಿಸಿತ್ತು.

ತಕ್ಷಣ ಎಚ್ಚತ್ತುಕೊಂಡಿದ್ದ ಶಾರೂಕ್ ಖಾನ್, ಗಂಗೂಲಿ ಇಲ್ಲದೇ ನೈಟ್ ರೈಡರ್ಸ್ ತಂಡವನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ತಂಡದಲ್ಲಿ ಇರದಿದ್ದರೂ ಈ ಸಾರಿ ಗಂಗೂಲಿ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಗಂಗೂಲಿ ಪರ ಫೇಸ್ ಬುಕ್ ನಲ್ಲಿಯೂ ವ್ಯಾಪಕ ಪ್ರತಿಭಟನೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+