ಮುಸ್ಲೀಮರಿಗಾಗಿ ಮದುವೆ ವೆಬ್ ಸೈಟ್ ಆರಂಭ

Muslim Matrimonial website by Akshara Group Belthangady
ಬೆಳ್ತಂಗಡಿ, ಜ.18: ಇಸ್ಲಾಂ ಧರ್ಮ ಆಧಾರಿತ ವಿವಾಹವನ್ನು ಅತ್ಯಂತ ಸರಳವಾಗಿ ವರದಕ್ಷಿಣೆ ರಹಿತವಾಗಿ ನಡೆಸುವ ಉದ್ದೇಶ ಹೊಂದಿರುವ ಸ್ಥಳೀಯ ಮಂಗಳೂರಿನ ಸಕ್ರಿಯ ಯುವಕರ ಗುಂಪು ವಿವಾಹ ಬಯಸುವವರಿಗಾಗಿ ವೆಬ್ ಲೋಕದಲ್ಲಿ ಸೂಕ್ತ ವೇದಿಕೆ ಕಲ್ಪಿಸಿದೆ.

ಸಮಾಜದಲ್ಲಿ ವರದಕ್ಷಿಣೆ ಹಾಗೂ ಮದುವೆ ಹೆಸರಿನಲ್ಲಿ ದುಂದು ವೆಚ್ಚ, ಅಹಿತಕರ ಘಟನೆಗಳು ಹೆಚ್ಚುತ್ತಿದ್ದು, ಇದು ಸಮಾಜಕ್ಕೆ ಶಾಪವಾಗಿ ಕಾಡುತ್ತಿದೆ. ಇದನ್ನು ತೊಲಗಿಸಲು ಸಮಾಜ ಬಗ್ಗೆ ಕಳಕಳಿಯುಳ್ಳ ಯುವಕರು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ವೆಬ್ ತಾಣವನ್ನು ಲೋಕಾರ್ಪಣೆ ಮಾಡಿದ ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಹೇಳಿದರು.

ಸಾಮಾಜಿಕ ಶೈಕ್ಷಣಿಕ ಹಾಗೂ ಔದ್ಯೋಗಿಕ ವಲಯಗಳಲ್ಲಿ ಮುಸ್ಲಿಂ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ಅಕ್ಷರ ಗ್ರೂಪ್ ವತಿಯಿಂದ ಮುಸ್ಲಿಂ ಮ್ಯಾಟ್ರಿಮೋನಿಯಲ್ ವೆಬ್ ಸೈಟ್[ www.muslimalnikah.com] ಅನ್ನು ಆರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 94831 56159, 96630 39875.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಕ್ರಿಯೇಟಿವ್ ಫೌಂಡೇಶನ್‌ನ ಮುಖ್ಯಸ್ಥ ಅನ್ವರ್ ಸಾದಾತ್ ಮಾತನಾಡಿ, ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುವ ಕಾರ್ಯಕ್ರಮವೊಂದನ್ನು ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ ಖೆಟ್ಟಿ, ಬೆಳ್ತಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಶಂಸುದ್ದೀನ್ ದಾರಿಮಿ ಮತ್ತಿತ್ತರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. [ಮದುವೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+