ಟಿಸಿಎಸ್ ಗೆ 15 ಸಾವಿರ ಉದ್ಯೋಗಿಗಳು ಬೇಕಂತೆ
ಮುಂಬೈ,
ಜ. 18 : ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್(ಟಿಸಿಎಸ್) ನಾಲ್ಕನೇ ತ್ರೈಮಾಸಿಕ (ಜನವರಿಯಿಂದ ಮಾರ್ಚ್ 2011) ಅವಧಿಯೊಳಗೆ 12 ರಿಂದ 15 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ. id="toptextpromo">ಕೇವಲ
ಹತ್ತು ತಿಂಗಳ ಅವಧಿ ಅಂದರೆ 2010ರ ಡಿಸೆಂಬರ್ ಅಂತ್ಯದ ವೇಳೆಗೆ ಕಂಪನಿಯೂ ಸುಮಾರು 50 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ನಾಲ್ಕನೇ ತ್ರೈಮಾಸಿಕ ಮುಗಿಯುವುದರೊಳಗೆ ಇನ್ನು 12 ರಿಂದ 15 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಚಿಸಲಾಗಿದೆ ಎಂದು ಟಿಸಿಎಸ್ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಜಯ್ ಮುಖರ್ಜಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆರ್ಥಿಕ
ಕುಸಿತ ನಂತರ ಕಂಪನಿಗೆ ಜಾಗತಿಕ ಮಟ್ಟದಲ್ಲಿ ನೂತನ ಯೋಜನೆಗಳು ಸಿಕ್ಕಿದ್ದು, ಕೆಲಸ ಹೆಚ್ಚಾಗಿದ್ದರಿಂದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಟಿಸಿಎಲ್ 20,219 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಂದೇ ತ್ರೈಮಾಸಿಕದಲ್ಲಿ ಇಷ್ಟು ದೊಡ್ಡ ಮಟ್ಟದ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವುದು ಇದೇ ಪ್ರಥಮ ಎಂದು ಮುಖರ್ಜಿ ವಿವರಿಸಿದರು. ಸದ್ಯ 1,86,914 ಉದ್ಯೋಗಿಗಳು ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.(ಟಿಸಿಎಸ್)











Click it and Unblock the Notifications