ಮತದಾನಕ್ಕೆ ವಯಸ್ಸು ಎಷ್ಟಾಗ್ಬೇಕು...?
ನವದೆಹಲಿ,
ಜ. 12 : ಮತದಾನದ ವಯಸ್ಸು ಈಗಿರುವ 18 ವರ್ಷಕ್ಕಿಂತ ಕಡಿಮೆಯಾಗ್ಬೇಕೆ? ಹಾಗಾದರೆ ಎಷ್ಟಾಗ್ಬೇಕು? ಇಂತಹ ಪ್ರಶ್ನೆಯೊಂದು ಭಾರತೀಯ ಚುನಾವಣಾ ಆಯೋಗ ಮುಂದಿದೆ. ಮತದಾನದ ವಯಸ್ಸನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಯೋಗ ಚಿಂತನೆ ನಡೆಸಿದೆ ಎಂದು ಚುನಾವಣಾ ಆಯೋಗದ ಮುಖ್ಯಆಯುಕ್ತ ಎಸ್ ವೈ ಖುರೇಶಿ ಹೇಳಿದ್ದಾರೆ. id="toptextpromo">ಒರಿಸ್ಸಾದ
ಭುವನೇಶ್ವರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾನದ ಕನಿಷ್ಠ ವಯೋಮಿತಿಯನ್ನು 18 ರಿಂದ 16 ಇಳಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಮತದಾನದಲ್ಲಿ ಯುವಕರು ಹೆಚ್ಚು ಆಸಕ್ತಿ ವಹಿಸುತ್ತಿರುವುದರಿಂದ ಈ ಬಗ್ಗೆ ಚರ್ಚೆ ಆರಂಭಿಸಲಾಗಿದೆ. ಇದನ್ನು ಸರಕಾರದ ಗಮನಕ್ಕೂ ತರಲಾಗುವುದು ಎಂದರು. id='are-slot-1' class='oiad oi-axt oiadv'> id='top-searched-articles'>ಪ್ರಸ್ತುತ
ಯುವ ಜನತೆ ತಂತ್ರಜ್ಞಾನದಲ್ಲಿ ಹೆಚ್ಚು ಪರಿಣತರಾಗಿದ್ದು, ನಿತ್ಯದ ವಿದ್ಯಮಾನಗಳ ಕುರಿತು ಹೆಚ್ಚು ತಿಳುವಳಿಕೆಯನ್ನು ಹೊಂದಿದ್ದಾರೆ. ಮತದಾನದ ಕನಿಷ್ಠ ವಯಸ್ಸನ್ನು 16 ವರ್ಷಗಳಿಗೆ ಇಳಿಕೆ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಖುರೇಶಿ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ಮಾಡಲಿದೆ ಎಂದು ಹೇಳಿದರು.











Click it and Unblock the Notifications