ಐಗೇಟ್ ಮಡಿಲಿಗೆ ಪಟ್ನಿ ಕಂಪ್ಯೂಟರ್ಸ್

ಈ ಸ್ವಾಧೀನ ಪ್ರಕ್ರಿಯೆಯ ಒಟ್ಟು ಮೊತ್ತ 921 ದಶಲಕ್ಷ ಡಾಲರ್. ಈ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಮುಂಬೈ ಷೇರುಪೇಟೆಯಲ್ಲಿ ಪಟ್ನಿ ಕಂಪ್ಯೂಟರ್‌ನ ಷೇರು ಬೆಲೆ ಶೇ 1.46ರಷ್ಟು ಏರಿಕೆಯಾಗಿದೆ. ಐಟಿ ಸೇವಾ ಉದ್ದಿಮೆ ರಂಗದಲ್ಲಿ ಇದು ಹೊಸ ದೊಡ್ಡ ಒಪ್ಪಂದಗಳನ್ನು ಹಾಗೂ ಗುತ್ತಿಗೆಗಳನ್ನು ಪಡೆಯಲು ನೆರವಾಗಲಿದೆ.
ಸಂಸ್ಥೆಯ ಸ್ಥಾಪಕರಾಗಿರುವ ನರೇಂದ್ರ ಪಟ್ನಿ, ಗಜೇಂದ್ರ ಪಟ್ನಿ ಮತ್ತು ಅಶೋಕ್ ಪಟ್ನಿ ಅವರ ಶೇಕಡಾ 45.60ರಷ್ಟು ಪಾಲು ಬಂಡವಾಳವನ್ನು ಮತ್ತು ಜನರಲ್ ಅಟ್ಲಾಂಟಿಕ್‌ನ ಶೇ 17.4ರಷ್ಟು ಪಾಲನ್ನು ಖರೀದಿಸಲಾಗುವುದು ಎಂದು ಐಗೇಟ್‌ನ ಸಿಇಒ ಫಣೀಶ್ ಮೂರ್ತಿ ಹೇಳಿದ್ದಾರೆ.
1978ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪಟ್ನಿ ಕಂಪ್ಯೂಟರ್, ಮಧ್ಯಮ ಗಾತ್ರದ ಐಟಿ ಸೇವಾ ಸಂಸ್ಥೆಯಾಗಿದೆ. ದೂರಸಂಪರ್ಕ, ವಿಮೆ, ನಾಗರಿಕ ಸೇವೆ ಮತ್ತು ಚಿಲ್ಲರೆ ವಹಿವಾಟು ವಲಯದಲ್ಲಿ ಸೇವೆ ಒದಗಿಸುತ್ತಿದೆ. 2010ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಅವಧಿಯಲ್ಲಿ ಸಂಸ್ಥೆಯಲ್ಲಿ ಒಟ್ಟು 16,446 ಉದ್ಯೋಗಿಗಳು ಮತ್ತು 282 ಗ್ರಾಹಕರು ಇದ್ದಾರೆ.(ಸಾಫ್ಟ್ ವೇರ್ ಕಂಪನಿ)












Click it and Unblock the Notifications