ಇಮೇಲ್ ಮಾರ್ಕೆಟಿಂಗ್ : ನೆಟ್ ಕೋರ್ ಮಹತ್ತರ ಹೆಜ್ಜೆ
ನವದೆಹಲಿ,
ಜ. 08 : ಡಿಜಿಟಲ್ ಮಾರ್ಕೆಂಟಿಂಗ್ ನಲ್ಲಿ ದೊಡ್ಡಣ್ಣನಂತಿರುವ ನೆಟ್ ಕೋರ್ ಸಲ್ಯುಷನ್ಸ್ ಸಂಸ್ಥೆ ಇಮೇಲ್ ಮಾರ್ಕೆಟಿಂಗ್ ನಲ್ಲಿ 2011ರ ತನ್ನ ಯೋಜನೆಗಳನ್ನು ಪ್ರಕಟಿಸಿದ್ದು, ಜ.7ರಿಂದ ದುಂಡು ಮೇಜಿನ ಚರ್ಚೆಗೆ ಚಾಲನೆ ನೀಡಿದೆ. id="toptextpromo">ಇಂಟರ್ನೆಟ್
ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಜೊತೆ ಜಂಟಿಯಾಗಿ ಆಯೋಜಿಸಿರುವ ಈ ಸಂಕಿರಣದಲ್ಲಿ ಇಮೇಲ್ ಮಾರ್ಕೆಟಿಂಗ್ ಎಂದರೇನು, ಯಶಸ್ಸಿಗೆ ಹೇಗೆ ಸಹಾಯಕವಾಗುತ್ತಿದೆ ಎಂಬ ಕುರಿತು ಉದ್ಯಮಿಗಳು ತಮ್ಮ ಅನುಭವಗಳನ್ನು ಚರ್ಚಿಸಿದರು. ಜ.7ರಂದು ನಡೆದ ವಿಚಾರ ಸಂಕಿರಣದಲ್ಲಿ ಸಂದೀಪ್ ಲಖಾನಿ, ಸಲೀಲ್ ಕುಮಾರ್, ಅಮಿತಾಭ್ ಸರನ್, ಹಿತೇಶ್ ಓಬೆರಾಯ್ ಭಾಗವಹಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಈ
ಯೋಜನೆಯ ಬಗ್ಗೆ ನೆಟ್ ಕೋರ್ ಸಲ್ಯುಷನ್ಸ್ ನ ಸಿಇಓ ಆಗಿರುವ ಅಭಿಜಿತ್ ಸಕ್ಸೇನಾ ಅವರು, ಇಮೇಲ್ ಮಾರ್ಕೆಟಿಂಗ್ ಗೆ ಭಾರತದಲ್ಲಿ ಅದ್ಭುತ ಭವಿಷ್ಯವಿದೆ. ಒಂದು ಸರಳ ಇಮೇಲ್ ಮುಖಾಂತರ ಒಂದು ಉತ್ಪನ್ನವನ್ನು ಲಾಭದಾಯಕವಾಗಿ ಪರಿವರ್ತಿಸಲು ಸಾಧ್ಯ ಎಂದು ಹೇಳಿದ್ದಾರೆ. 2010ರಲ್ಲಿ ತಿಂಗಳಿನಿಂದ ತಿಂಗಳಿಗೆ ಭಾರೀ ಪ್ರಗತಿ ಸಾಧಿಸಿರುವ ನೆಟ್ ಕೋರ್ ಸಲ್ಯುಷನ್ಸ್, 2 ಬಿಲಿಯನ್ ಇಮೇಲ್ ಖಾತೆಗಳನ್ನು ದಾಟಿದೆ. ಎರಡನೇ ಚರ್ಚಾಕೂಟವನ್ನು ನೆಟ್ ಕೋರ್ ಏಪ್ರಿಲ್ ತಿಂಗಳಲ್ಲಿ ಆಯೋಜಿಸುತ್ತಿದೆ. [ಮೊಬೈಲ್]











Click it and Unblock the Notifications