ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಪಂ ಫಲಿತಾಂಶ:11 ಕ್ಷೇತ್ರಗಳಲ್ಲಿ 10 ಬಿಜೆಪಿ ಪಾಲು

By Mahesh
|
Google Oneindia Kannada News

ZP poll results : BJP gets initial lead
ಬೆಂಗಳೂರು, ಜ.4: ಭಾರಿ ಕುತೂಹಲ ಕೆರಳಿಸಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಆರಂಭಿಕ ಫಲಿತಾಂಶದಂತೆ ಬಿಜೆಪಿ ಜಯಭೇರಿ ಬಾರಿಸಿದೆ. ಮಂಗಳವಾರ (ಜ.4) ಮಧ್ಯಾಹ್ನದ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರ ಬೀಳಲಿದೆ. ಚುನಾವಣಾ ಆಯೋಗದ ವೆಬ್ ತಾಣದಲ್ಲಿ ಫಲಿತಾಂಶ ಪಟ್ಟಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.

ಸದ್ಯದ ವರದಿ ಹೀಗಿದೆ: ಬೆಂಗಳೂರು ಜಿಪಂ: 34 ಕ್ಷೇತ್ರಗಳಲ್ಲಿ 3 ಸೀಟುಗಳ ಫಲಿತಾಂಶ ಪ್ರಕಟ. ಕಾಂಗ್ರೆಸ್ 2, ಜೆಡಿಎಸ್ 1 ರಲ್ಲಿ ಗೆಲುವು. ತಾಪ: ಚಾಮರಾಜನಗರ ಜಿಲ್ಲೆಯಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ 7, ಕಾಂಗ್ರೆಸ್ 5ರಲ್ಲಿ ಗೆಲುವು. ಬೆಂಗಳೂರು ತಾಪಂ 4 ರಲ್ಲಿ ಬಿಜೆಪಿ 2, ಜೆಡಿಎಸ್ 1, ಎನ್ ಸಿಪಿ 1 ರಲ್ಲಿ ಗೆಲುವು.

ಉತ್ತರ ಕನ್ನಡ ತಾಪಂ 12 ಕ್ಷೇತ್ರದಲ್ಲಿ ಕಾಂಗ್ರೆಸ್ 7ರಲ್ಲಿ ಜಯ.
ಉಡುಪಿ ತಾಪಂ 4 ಕ್ಷೇತ್ರದಲ್ಲಿ ಬಿಜೆಪಿಗೆ 3ರಲ್ಲಿ ಜಯ
ತುಮಕೂರು 6 ಕ್ಷೇತ್ರದಲ್ಲಿ 6 ಕೂಡಾ ಬಿಜೆಪಿಗೆ ಒಲಿದಿದೆ.

ಒಟ್ಟಾರೆ 9.30 ಸಮಯಕ್ಕೆ 11 ಕ್ಷೇತ್ರಗಳ ಫಲಿತಾಂಶದಲ್ಲಿ 10 ಬಿಜೆಪಿ ಪಾಲಾಗಿದೆ.

ಗುಲ್ಬರ್ಗಾ, ಗದಗ ಜಿಪಂ ಬಿಜೆಪಿ ಮುನ್ನಡೆ. ಬೀದರ್ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ. ರಾಯಚೂರು ಯರಗೆರೆ ಜಿಪಂ ಕಾಂಗ್ರೆಸ್ ಮುನ್ನಡೆ. ಮೈಸೂರು ಜಿಪಂ ಇಣಕಲ್ ಕಾಂಗ್ರೆಸ್ ಮುನ್ನಡೆ. ಉಡುಪಿ ಜಿಪಂ 5 ಕಡೆ ಬಿಜೆಪಿ ಮುನ್ನಡೆ. ಕೊಡಗು ಜಿಪಂ ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 1 ಕಡೆ ಮುನ್ನಡೆ.

ಕಣದಲ್ಲಿರುವ 16,634 ಅಭ್ಯರ್ಥಿಗಳ ಭವಿಷ್ಯವನ್ನು ಅಷ್ಟೇ ಅಲ್ಲದೆ, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಂದಿನ ಹೋರಾಟದ ದಿಕ್ಸೂಚಿಯಾಗಲಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಬಹುತೇಕ ಎಲ್ಲ ಕಡೆ ಇಂದು ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಿರುವುದರಿಂದ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. 171 ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲೂ ಫಲಿತಾಂಶವನ್ನು ಪ್ರಕಟಿಸಲು ವ್ಯವಸ್ಥೆ ಮಾಡಲಾಗಿದೆ.

30 ಜಿಲ್ಲಾ ಪಂಚಾಯಿತಿಗಳ 1,012 ಕ್ಷೇತ್ರಗಳು ಮತ್ತು 176 ತಾಲ್ಲೂಕು ಪಂಚಾಯಿತಿಗಳ 3,650 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಅಂದರೆ ಡಿ.26 ಮತ್ತು 31, ಜನವರಿ ಒಂದರಂದು ಚುನಾವಣೆ ನಡೆದಿದ್ದು, ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಮತ್ತು ಎಂಟು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.

ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿಯ ತಿಪ್ಪಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಇದೇ 16ರಂದು ಚುನಾವಣೆ ನಡೆಯಲಿದ್ದು, 19ಕ್ಕೆ ಮತ ಎಣಿಕೆ ನಡೆಯಲಿದೆ. [ಜಿಲ್ಲಾ ಪಂಚಾಯತಿ ಚುನಾವಣೆ]

English summary
Ruling BJP govt has taken intial lead in Karataka ZP and TP poll. counting of votes started today at 8AM and full result will be out by noon. BJP has won 10 out of 11 ZP so far. North Karnatka is again favoring BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X