ಬಿಹಾರದಲ್ಲಿ ಮಹಿಳೆಯಿಂದ ಶಾಸಕನ ಭೀಕರ ಹತ್ಯೆ

Bihar MLA Raj Kishore Keshari
ಬೆಂಗಳೂರು, ಜ. 04 : ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬಳು ಬಿಹಾರದ ಆಡಳಿತ ಪಕ್ಷದ ಶಾಸಕ ರಾಜ್ ಕಿಶೋರ್ ಕೇಶರಿ ಎಂಬುವವರನ್ನು ಚಾಕುವಿನಿಂದ ತಿವಿದು ಮಂಗಳವಾರ ಹತ್ಯೆಗೈದಿದ್ದಾಳೆ.

ನಾಲ್ಕು ಬಾರಿ ಎಂಎಲ್ಎ ಆಗಿರುವ 51 ವರ್ಷದ ಕೇಶರಿ ಇಂದು ಬೆಳಗಿನ ಜಾವ ಸಿಪಾಹಿ ತೋಲಾದಲ್ಲಿರುವ ನಿವಾಸದಲ್ಲಿ ಸಂದರ್ಶಕರನ್ನು ಭೇಟಿಯಾಗುತ್ತಿದ್ದ ಸಮಯದಲ್ಲಿ ರೂಪಂ ಪಾಠಕ್ ಎಂಬಾಕೆಯಿಂದ ಈ ಹತ್ಯೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಕೇಶರಿಯನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ವೃತ್ತಿಯಿಂದ ಶಾಲಾ ಶಿಕ್ಷಕಿಯಾಗಿರುವ ರೂಪಂ ಪಾಠಕ್ ಅವರನ್ನು ಕೂಡಲೆ ಹಿಡಿದುಕೊಂಡ ಸಂದರ್ಶಕರು ಮನಬಂದಂತೆ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ರೂಪಂರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಇರಿಸಿರುವ ಪಾಠಕ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ನೀಲಮಣಿ ಹೇಳಿದ್ದಾರೆ.

ಕೇಶರಿ ಅವರು ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಕಳೆದ ವರ್ಷ ಪಾಠಕ್ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಪಾಠಕ್ ಮತ್ತು ಅವರ ಬೆಂಬಲಿಗರು ಸತತ ಮೂರು ವರ್ಷಗಳಿಂದ ಸತತವಾಗಿ ಲೈಂಗಿಕ ದೌರ್ಜನ್ಯಕ್ಕೊಳಪಡಿಸಿದ್ದಾರೆ ಎಂದೂ ಅವರು ದೂರಿನಲ್ಲಿ ಆರೋಪಿಸಿದ್ದರು. ಮನನೊಂದಿದ್ದ ಪಾಠಕ್ ಇಂದು ಏಕಾಏಕಿ ಕೇಶರಿ ಅವರ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ.

ಕೇಶರಿ ಅವರ ಆಘಾತಕಾರಿ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎಲ್ಲ ಶಾಸಕರಿಗೆ ನೀಡಿರುವ ಭದ್ರತೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದ್ದಾರೆ. ಈ ಪ್ರಕರಣ ಕುರಿತು ತನಿಖೆ ನಡೆಸಿ, ಎಲ್ಲ ಸಂದರ್ಶಕರ ಆಗುಹೋಗುಗಳ ಬಗ್ಗೆ ತೀವ್ರ ನಿಗಾ ಇಡಬೇಕೆಂದೂ ಅಪ್ಪಣೆ ಮಾಡಿದ್ದಾರೆ. [ಲೈಂಗಿಕ ದೌರ್ಜನ್ಯ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+