ಆರ್ ಟಿಐ ನಿಯಮ ಮೀರಿದ ಮಹೇಶ್ ಜೋಶಿ

ಮಾಹಿತಿ ಕೇಳಿದ ಅರ್ಜಿದಾರನ ವೈಯಕ್ತಿಕ ಹಿನ್ನೆಲೆ, ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಪಡೆಯಲು ಅಡ್ಡಿಯಾಗುವಂತಿಲ್ಲ ಎಂದು ಹೆೀಳಿ ಜನವರಿಯಿಂದ ಮೇ ತಿಂಗಳ ವೇತನದಲ್ಲಿ ತಲಾ 5 ಸಾವಿರ ರೂ.ಗಳಂತೆ ದಂಡದ ಹಣವನ್ನು ಕಡಿತಗೊಳಿಸುವಂತೆ ದೂರದರ್ಶನದ ಮಹಾ ನಿರ್ದೇಶಕರಿಗೆ ಕೇಂದ್ರ ಮಾಹಿತಿ ಆಯೋಗ ಆದೇಶಿಸಿದೆ.
ದೂರದರ್ಶನ ಅಧಿಕಾರಿಯೊಬ್ಬರಿಗೆ ಅಷ್ಟೇ ಅಲ್ಲದೆ, ಕರ್ನಾಟಕದ ಕೇಂದ್ರ ಸರಕಾರದ ಅಧಿಕಾರಿಯೊಬ್ಬರಿಗೆ ಆಯೋಗ ದಂಡ ವಿಧಿಸುತ್ತಿರುವ ಪ್ರಥಮ ಪ್ರಕರಣ ಇದಾಗಿದೆ. 2005ರಿಂದ 2008ರ ಅವಧಿಯಲ್ಲಿ ಬೆಂಗಳೂರು ದೂರದರ್ಶನ ವಾರ್ತೆಯಲ್ಲಿ ಮಹೇಶ್ ಜೋಶಿಯವರಿಗೆ ಸಂಬಂಧಿಸಿ ಪ್ರಸಾರವಾದ ಸುದ್ದಿ ಮತ್ತು ದೃಶ್ಯಗಳ ವಿವರಗಳ ಬಗ್ಗೆ ಮಾಹಿತಿ ಕೋರಿ ಬೆಂಗಳೂರಿನ ನಿವಾಸಿ ಅಶೋಕ್ ಎಂಬವರು ದೂರದರ್ಶನಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ, ಸೂಕ್ತ ಮಾಹಿತಿ ಒದಗಿಸದ ಮಹೇಶ್ ಜೋಶಿ, ಅರ್ಜಿದಾರರು ಹಣಕ್ಕೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಸ್ಪಂದಿಸದಿದ್ದುದರಿಂದ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಈ ಮಾಹಿತಿಯನ್ನು ಕೇಳಿದ್ದಾರೆ. ಬ್ಲಾಕ್‌ಮೇಲ್ ತಂತ್ರವನ್ನು ಅನುಸರಿಸುತ್ತಿರುವ ಅಶೋಕ್‌ರಿಗೆ ಮಾಹಿತಿ ನೀಡಬಹುದೇ ಎಂದು ಮಹೇಶ್ ಜೋಶಿ ಕೇಂದ್ರ ಮಾಹಿತಿ ಆಯೋಗದ ಸಲಹೆ ಕೇಳಿದ್ದರು.
ಆಯೋಗವು ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರೂ, ಅದನ್ನು ಪರಿಗಣಿಸದ ಮಹೇಶ್ ಜೋಶಿಯವರಿಗೆ, ಕೇಂದ್ರ ಮಾಹಿತಿ ಆಯೋಗದ ಆಯುಕ್ತ ಎ.ಎನ್.ತಿವಾರಿ ಕಳೆದ ನ.29ರಂದು ವಿಚಾರಣೆ ನಡೆಸಿ 25 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದರು. ಅಲ್ಲದೆ, 2 ವಾರಗಳಲ್ಲಿ ಅರ್ಜಿದಾರರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಿದರು. [ದೂರದರ್ಶನ]












Click it and Unblock the Notifications