ಬೆಳಗಾವಿ-ಮುಂಬೈ ಕಿಂಗ್ ಫಿಷರ್ ವಿಮಾನ ಸೇವೆ

ಈ ಮೂಲಕ ಕಿಂಗ್ ಫಿಷರ್ ಕರ್ನಾಟಕದ ಗಡಿ ಪ್ರದೇಶದ ಪ್ರಯಾಣಿಕರಿಗೆ ಮುಖ್ಯವಾಗಿ ಉತ್ತರ ಕರ್ನಾಟಕದ ಉದ್ಯಮಿಗಳು, ರಾಜಕಾರಣಿಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವೆ ಆರಂಭಿಸಿದೆ. ದೇಶಿಯ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಂಬೈ ಕೇಂದ್ರವಾಗಿರಿಸಿಕೊಂಡು ಕಿಂಗ್ ಫಿಷರ್ ಒಟ್ಟು ಮೂರು ನೂತನ ದೇಶಿ ವಿಮಾನಗಳ ಸೇವೆಯನ್ನು ಆರಂಭಿಸಿದೆ.
ಮುಂಬೈ-ಬೆಳಗಾವಿ, ಮುಂಬೈ-ಇಂಧೋರ್, ಇಂಧೋರ್-ಜಬಲ್ ಪುರ್ ಸೇವೆಗಳನ್ನು ಆರಂಭಿಸಲಾಗಿದೆ. ಜನವರಿ 10ರಿಂದ ಮುಂಬೈ-ಬೆಳಗಾವಿ ಮತ್ತು ಜನವರಿ 24ರಿಂದ ಮುಂಬೈ-ಇಂದೋರ್, ಇಂಧೋರ್-ಜಬಲ್ ಪುರ್ ವಿಮಾನ ಸೇವೆ ಆರಂಭವಾಗಲಿದೆ ಎಂದು ಕಿಂಗ್ ಫಿಷರ್ ಏರ್ ಲೈನ್ಸ್ ನ ಉಪಾಧ್ಯಕ್ಷ ಮನೋಜ್ ಚಾಕೋ ತಿಳಿಸಿದ್ದಾರೆ.
ಮೈಸೂರು ದಸರಾ ಸಮಯದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮೈಸೂರು-ಬೆಂಗಳೂರು ವಿಮಾನ ಸೇವೆಯನ್ನು ಆರಂಭಿಸಲಾಗಿತ್ತು. ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಬೆಂಗಳೂರಿನಿಂದ-ಮೈಸೂರಿಗೆ ತೆರಳಿದ ಮೊದಲ ವಿಮಾನದಲ್ಲಿ ಪ್ರಯಾಣಿಸಿದ್ದು ವಿಶೇಷವಾಗಿತ್ತು. ಕಿಂಗ್ ಫಿಷರ್ ಮುಖ್ಯಸ್ಥ ವಿಜಯ್ ಮಲ್ಯ ಅವರನ್ನು ಅವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕಕ್ಕೆ ಮಲ್ಯ ಅವರು ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದ್ದರು.(ಕಿಂಗ್ ಫಿಷರ್)












Click it and Unblock the Notifications