60 ಸಾವಿರ ಅಡಿ ಎತ್ತರದಲ್ಲೂ ಗೂಗಲ್ ಮೊಬೈಲ್ ವರ್ಕಿಂಗ್

ಏಳು ಪೇ ಲೋಡ್ ಗಳಿಗೆ ಚಿಕ್ಕ ಆಂಡ್ರ್ಯಾಡ್ ನೆಕ್ಸಸ್ ಮೊಬೈಲ್ ಅನ್ನು ಹೊಂದಿಸಿ ಭೂಮಿಯ ಹೊರ ವಾಯುಮಂಡಲಕ್ಕೆ ಕಳುಹಿಸಲಾಗಿತ್ತು. ಆ ಮೂಲಕ ಕುತೂಹಲಕಾರಿ ಮಾಹಿತಿಗಳನ್ನು ಸೆನ್ಸಾರ್ ಗಳ ಮೂಲಕ ಸಂಗ್ರಹಿಸಲು ಯೋಜಿಸಲಾಗಿತ್ತು. ನೆಕ್ಸಸ್ ಎಸ್ ನ ಜಿಪಿಎಸ್ ಗೈರೋಸ್ಕೋಪ್, ಅಕ್ಸೆಲೆರೊಮೀಟರ್ ಹಾಗೂ ಮ್ಯಾಗ್ನೊಮೀಟರ್ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಗೂಗಲ್ ಮುಂದಾಗಿತ್ತು ಎಂದು ಜಿ ವಾಂಗ್ ಹೇಳಿದರು.
ಗೂಗಲ್ ಮ್ಯಾಪ್ 5.0 ಮೂಲಕ ಈ ಎಲ್ಲಾ ಸಾಧನಗಳನ್ನು ಹೊತ್ತ ಗ್ಯಾಸ್ ಬಲೂನ್ ಕೆಳಪಥದಲ್ಲಿ ಕಾಣುವ ದೃಶ್ಯಗಳ ಮಾಹಿತಿ ಹಾಗೂ ಗೂಗಲ್ ಸ್ಕೈ ಮ್ಯಾಪ್ ಮೂಲಕ ಇನ್ನಷ್ಟು ಆಕಾಶಕಾಯಗಳ ಮಾಹಿತಿ ಕಲೆಹಾಕಲಾಗಿದೆ ಎಂದು ವಾಂಗ್ ತಿಳಿಸಿದ್ದಾರೆ.
ಅಂದಾಜು (-)50 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯವುಳ್ಳ ನೆಕ್ಸಸ್ ಎಸ್ ನ ಜಿಪಿಎಸ್ ಮಾಹಿತಿಯಂತೆ 60 ಸಾವಿರ ಅಡಿ ಎತ್ತರದಲ್ಲೂ ವರ್ಕ್ ಆಗುತ್ತಿರುವುದನ್ನು ಸೂಚಿಸಿದೆ.
ಸುಮಾರು 139 ಮೈಲು/ಗಂಟೆ ವೇಗದಲ್ಲಿ ಸುಮಾರು 100,000 ಅಡಿವರೆಗೂ ಸಂಚರಿಸಿದ ನಂತರ ಬಲೂನ್ ಕೆಳಗಿಳಿದಿದೆ. ಸ್ಥಿರ ಹಾಗೂ ಚರ ವಿಡಿಯೋ ಕೆಮೆರಾಗಳ ಸಹಾಯದಿಂದ ಉಪಯುಕ್ತ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.
ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬಳಸಿರುವ ಆಂಡ್ರ್ಯಾಡ್ 2.3 ಆವೃತ್ತಿಯ ಗೂಗಲ್ ನೆಕ್ಸಸ್ ಎಸ್ ಸ್ಮಾರ್ಟ್ ಫೋನ್ ನ ಅನ್ ಲಾಕ್ಟ್ ಅವೃತ್ತಿ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿ ನೆಕ್ಸಸ್ ಎಸ್ ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿ ಇನ್ನೂ ಸಂಸ್ಥೆ ಪ್ರಕಟಿಸಿಲ್ಲ. ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಈ ಹೊಸ ಗೂಗಲ್ ಸ್ಮಾರ್ಟ್ ಫೋನ್ ಅನ್ನು ತಯಾರಿಸುತ್ತಿದೆ.












Click it and Unblock the Notifications