ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಕೊಲೆ
ಹ್ಯೂಸ್ಟನ್(ಅಮೆರಿಕ),
ಡಿ. 27 : ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ ಇಲ್ಲಿನ ಗ್ಯಾಸ್ ಸ್ಟೇಷನ್ ನಲ್ಲಿ ನಡೆದ ದರೋಡೆ ಸಮಯದಲ್ಲಿ ಹೈದರಾಬಾದ್ ಮೂಲದ 22 ವರ್ಷದ ವಿದ್ಯಾರ್ಥಿಯೊಬ್ಬ ಗುಂಡೇಟಿಗೆ ಬಲಿಯಾಗಿರುವ ಘಟನೆ ಭಾನುವಾರ ವರದಿಯಾಗಿದೆ. id="toptextpromo">ಸ್ಟೇಷನ್
ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಜಯಚಂದ್ರ ದರೋಡೆಕೋರನ ಗುಂಡೇಟಿಗೆ ಸಾವಿಗೀಡಾಗಿದ್ದಾನೆ. ಈತನ ದೇಹದೊಳಗೆ ಐದು ಗುಂಡುಗಳು ಹೊಕ್ಕಿವೆ. ಕ್ಯಾಲಿಪೋರ್ನಿಯಾ ಪ್ರದೇಶದ ಪೆಸಡೋನ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿದ್ದ ಜಯಚಂದ್ರ ಕಳೆದ ತಿಂಗಳ ಹಿಂದಷ್ಟೇ ಈ ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಎಂದು ಹ್ಯೂಸ್ಟನ್ ಕ್ರಾನಿಕಲ್ ಪತ್ರಿಕೆ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಸ್ಥಳೀಯ
ಕಾಲಮಾನ ಪ್ರಕಾರ ಮಧ್ಯರಾತ್ರಿ 2.20ಕ್ಕೆ ಸ್ಟೇಷನ್ ಒಳಗೆ ನುಗ್ಗಿದ ಮುಸುಕುಧಾರಿಗಳು ಅಂಗಡಿಯಲ್ಲಿದ್ದ ಹಣ ಲೂಟಿ ಮಾಡುವ ಮೊದಲು ಜಯಚಂದ್ರರತ್ತ ಗುಂಡು ಹಾರಿಸಿ ನಂತರ ದರೋಡೆ ಮಾಡಿದ್ದಾರೆ ಎಂದು ಸಿಸಿಟಿವಿ ಚಿತ್ರಗಳಿಂದ ತಿಳಿದು ಬಂದಿದೆ. (ಅಮೆರಿಕ)












Click it and Unblock the Notifications