ತಿರುಪತಿ ಲಾಡುಗೆ 2200 ಟನ್ ನಂದಿನಿ ತುಪ್ಪ

ಈ ಬಾರಿಯೂ ತಿರುಪತಿ ಲಾಡು ತಯಾರಿಕೆಗೆ ನಂದಿನಿ ತುಪ್ಪವನ್ನು ಸರಬರಾಜು ಮಾಡುವ ಗುತ್ತಿಗೆ ಕೆಎಂಎಫ್‌ಗೆ ಲಭ್ಯವಾಗಿದೆ. ಜನವರಿ 2011ರಿಂದ ಡಿಸೆಂಬರ್ ವರೆಗೆ 2200 ಟನ್ ನಂದಿನಿ ತುಪ್ಪವನ್ನು ಸರಬರಾಜು ಮಾಡುವಂತೆ ಕೆಎಂಎಫ್ ಜತೆ ತಿರುಪತಿ ತಿರುಮಲ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡಿದೆ.
ಸರ್ವಜನಪ್ರಿಯ ಬೂಂದಿ ಲಾಡು ರೆಸಿಪಿ
ಹಿಂದಿನ ವರ್ಷ 1700 ಟನ್ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡಲಾಗಿತ್ತು. ಈ ವರ್ಷ 500 ಟನ್ ಅಧಿಕವಾಗಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ. ಆಂಧ್ರ ಹಾಗೂ ಮಹಾರಾಷ್ಟ್ರದತೀವ್ರ ಪೈಪೋಟಿಯ ನಡುವೆಯೂ ಕೆಎಂಎಫ್ ಗುತ್ತಿಗೆ ಪಡೆದಿರುವುದು ವಿಶೇಷ. ರು.57.50 ಕೋಟಿ ಮೌಲ್ಯದ ತುಪ್ಪವನ್ನು ಸರಬರಾಜು ಮಾಡಬೇಕಾಗಿದೆ. [ಸಿಹಿಸಿಹಿ ಲಾಡು]












Click it and Unblock the Notifications