ಬಿಐಎಎಲ್ ದೇಶದ ತ್ವರಿತ ಬೆಳವಣಿಗೆಯ ನಿಲ್ದಾಣ

ಮೇ 2008ರಿಂದ ಇಲ್ಲಿವರೆಗಿನ ಅಂಕಿ ಅಂಶಗಳ ಪ್ರಕಾರ ಡಿ.17, 2010 ದಿನವೊಂದರಲ್ಲೇ ಸುಮಾರು 38,134 ಪ್ರಯಾಣಿಕರನ್ನು ಸಂಭಾಳಿಸಿದ್ದು ಸರ್ವಕಾಲಿಕ ದಾಖಲೆಯಾಗಿದೆ. ಕಾರ್ಗೊ ವಿಮಾನಯಾನದಲ್ಲೂ ಶೇ.31ರಷ್ಟು ಪ್ರಗತಿ ಉಂಟಾಗಿದೆ. ಈ ವರ್ಷ ಫೆಡ್ ಎಕ್ಸ್ ನಿಂದ ಭಾರತ ಹಾಗೂ ಯುರೋಪಿಗೆ, ಡೆಕ್ಕನ್ ಕಾರ್ಗೊ ಕೊಯಮತ್ತೂರ್, ನಾಗಪುರ ಹಾಗೂ ಹೈದರಾಬಾದಿಗೆ ಸಂಪರ್ಕ ಸಾಧಿಸಲಾಗಿದೆ ಎಂದು ಬಿಐಎಲ್ ಅಧ್ಯಕ್ಷ ಮಾರ್ಸೆಲ್ ಹೇಳಿದರು.
ಹೊಸ ವರ್ಷಕ್ಕೆ ಹೊಸ ಮಾರ್ಗಗಳು: ವರ್ಷಕ್ಕೆ ಎರಡು ಅಂತಾರಾಷ್ಟ್ರೀಯ ಮಾರ್ಗಗಳನ್ನು ಸೇರ್ಪಡೆ ಮಾಡಿಕೊಳ್ಳುವ ಉದ್ದೇಶವನ್ನು ಬಿಐಎಎಲ್ ಹೊಂದಿದೆ. ಬೆಂಗಳೂರಿನಿಂದ ಈಶಾನ್ಯ ಏಷ್ಯಾ, ಚೀನಾ, ಆಫ್ರಿಕಾ ಹಾಗೂ ಅಮೆರಿಕದ ಪ್ರಮುಖ ನಗರಗಳಿಗೆ ಸಂಪರ್ಕ ಸಾಧಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಮುಂದಿನ ತಿಂಗಳಿನಿಂದ ಎಟಿಹಾದ್ ಏರ್ ಲೈನ್ಸ್ ಮೂಲಕ ಅಬು ದಾಬಿಗೆ ನೇರ ವಿಮಾನ ಸಂಪರ್ಕ ಆರಂಭವಾಗಲಿದೆ. ಥಾಯ್ ಏರ್ ಏಷ್ಯಾ, ಥಾಯ್ ಟೈಗರ್, ಡಿಎಚ್ ಎಲ್ ಕಾರ್ಗೊ, ಟಿಎನ್ ಟಿ ಕಾರ್ಗೊ, ಚೀನಾ ಸದರನ್ ಹಾಗೂ ಎಎನ್ಎ ಏರ್ ವೇಸ್ ಗಳು ಬೆಂಗಳೂರಿನಿಂದ ವಿಮಾನಯಾನ ಆರಂಭಿಸಲು ಉತ್ಸುಕವಾಗಿದೆ ಎಂದು ಬಿಐಎಎಲ್ ನ ಅಧ್ಯಕ್ಷ ಮಾರ್ಸೆಲ್ ಹಂಗರ್ ಬೂಹ್ಲರ್ ಹೇಳಿದ್ದಾರೆ. [ಬಿಐಎಎಲ್]












Click it and Unblock the Notifications