ಬಿಡಿಎ ಇ ಹರಾಜು ಕಾರ್ನರ್ ಸೈಟ್ ಮಾರಾಟ

ಇ ಆಡಳಿತದ ನೆರವು: ಮಾಹಿತಿ ತಂತ್ರಜ್ಞಾನವನ್ನು ತನ್ನೆಲ್ಲಾ ವಿಭಾಗಕ್ಕೂ ವಿಸ್ತರಿಸುವ ಜೊತೆಗೆ ಇ-ಆಡಳಿತ ಇಲಾಖೆಯ ನೆರವಿನಿಂದ ಇ-ಹರಾಜು ಪ್ರಕ್ರಿಯೆಗೆ ಬಿಡಿಎ ವಿಶೇಷ ಯೋಜನೆ ಕೈಗೆತ್ತಿಕೊಂಡಿತ್ತು. ಈಗ ಪ್ರಾಯೋಗಿಕವಾಗಿ ಹೊಸ ಯೋಜನೆಗೆ ಗುರುವಾರ(ಡಿ.23) ಚಾಲನೆ ಸಿಕ್ಕಿದೆ.
ಆರಂಭದಲ್ಲಿ ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಐದು ಬಡಾವಣೆಗಳಲ್ಲಿನ ಒಟ್ಟು 53 ನಿವೇಶನಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯ ಬಯಸುವವರಿಗೆ ಬಿಡಿಎ ಕೇಂದ್ರ ಕಚೇರಿಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಗುರುವಾರದಿಂದ ಆರಂಭವಾಗಲಿರುವ ಹರಾಜು ಪ್ರಕ್ರಿಯೆ ಜನವರಿ.1ಕ್ಕೆಕೊನೆಗೊಳ್ಳಲಿದೆ. ಜೊತೆಗೆ ಇದರ ಬಗ್ಗೆ ಅಂತರ್ಜಾಲ ತಾಣದಲ್ಲೂ ಮಾಹಿತಿ ಪಡೆಯಬಹುದು ಎಂದು ಬಿಡಿಎ ಆಯುಕ್ತ ಭರತ್‌ಲಾಲ್ ಮೀನಾ ತಿಳಿಸಿದ್ದಾರೆ. [ಬಿಡಿಎ]












Click it and Unblock the Notifications