ಟೈರ್ ಕೊಂಡರೆ 5 ಕೆಜಿ ಈರುಳ್ಳಿ ಬಿಲ್ಕುಲ್ ಉಚಿತ!

Onion is for free!
ಜೆಮ್ಶೆಡ್ ಪುರ, ಡಿ. 22 : ಪೆಟ್ರೋಲಿಗಿಂತ ತುಟ್ಟಿಯಾಗಿರುವ ಈರುಳ್ಳಿ ದೇಶದಾದ್ಯಂತ ಜನರ ಕಣ್ಣೀರಿನ ಕೋಡಿ ಹರಿಸುತ್ತಿದ್ದರೆ ಇಲ್ಲೊಬ್ಬ ಈರುಳ್ಳಿಯನ್ನು ಉಚಿತವಾಗಿ ನೀಡುತ್ತಿದ್ದಾನೆ, ಅವನ ಅಂಗಡಿಯಲ್ಲಿ ಟೈರನ್ನು ಕೊಂಡರೆ ಮಾತ್ರ! ಹೇಗಿದೆ ಟೈರ್ ಮಾರಲು ಆತ ಕಂಡುಕೊಂಡಿರುವ ವಿನೂತನ ಮಾರ್ಗ?

ಟ್ರಕ್ ಟೈರನ್ನು ಕೊಂಡರೆ 5 ಕೆಜಿ ಈರುಳ್ಳಿ ಉಚಿತ. ಕೆಜಿಗೆ 60 ರು. ಅಂದುಕೊಂಡರೂ 300 ರು.ನಷ್ಟು ಟ್ರಕ್ ಟೈರ್ ಮೇಲೆ ರಿಯಾಯಿತಿ ಸಿಕ್ಕಂತೆ. ಕಾರು ಟೈರು ಕೊಂಡರೆ 1 ಕೆಜಿ ಈರುಳ್ಳಿ ಉಚಿತ.

ಗ್ಯಾಲರಿ : ಬೆಂಗಳೂರಿನ ಹಾಪ್ಕಾಮ್ಸ್ ನಲ್ಲಿ ತಾಜಾ ತರಕಾರಿ

ಸತ್ನಂ ಸಿಂಗ್ ಗಂಭೀರ್ ಒಬ್ಬ ಪಕ್ಕಾ ವ್ಯಾಪಾರಿಯಷ್ಟೇ ಅಲ್ಲ ಪಕ್ಕಾ ರಾಜಕಾರಣಿ ಕೂಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಾರ್ಖಂಡದಲ್ಲಿ ಕಣಕ್ಕಿಳಿದಿದ್ದ ಗಂಭೀರ್ ಮತದಾರರನ್ನು ಮತಹಾಕಲು ಪುಸಲಾಯಿಸಲು ರಿಯಾಯಿತಿ ದರದಲ್ಲಿ ಟೈರ್ ಮಾರಾಟ ಮಾಡಿದ್ದ. ಬಿಹಾರ ಮತ್ತು ಜಾರ್ಖಂಡದ ಅಖಿಲ ಭಾರತೀಯ ಸಿಖ್ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷನಾಗಿದ್ದಾನೆ ಗಂಭೀರ್. [ಈರುಳ್ಳಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+