ವಿಟ್ಲದಲ್ಲಿ ಆಟೋ ಜೋಡಿ ಸರಸ ತಂದ ಕಸಿವಿಸಿ

Vitla College Scandals
ವಿಟ್ಲ, ಡಿ.21: ವಿಟ್ಲ ಸಮೀಪದ ಅಡ್ಯನಡ್ಕ ಪದವಿಪೂರ್ವ ಕಾಲೇಜಿಗೆ ಕಾಮರೋಗ ಬಡಿದಿದೆ. ಪೆರ್ಲದ ರಿಕ್ಷಾ ಚಾಲಕನೋರ್ವ ವಿದ್ಯಾರ್ಥಿನಿಯೋರ್ವಳನ್ನು ಅಡ್ಯನಡ್ಕ ಜಂಕ್ಷನ್ ಸಮೀಪದ ಗುಡ್ಡೆಗೆ ಕರೆದೊಯ್ದು, ಕಾಮದಾಟದಲ್ಲಿ ತೊಡಗಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಕಸಿವಿಸಿಗೊಂಡು ಪರಾರಿಯಾದ ಘಟನೆ ನಡೆದಿದೆ. ಅಡ್ಯನಡ್ಕ ಕಾಲೇಜಿನಲ್ಲಿ ಇದು ಮೂರನೇ ಪ್ರೇಮ ಪ್ರಕರಣವಾಗಿದ್ದು, ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೀಡಾಗಿದ್ದಾರೆ.

ಸೋಮವಾರ ಕಾಲೇಜಿನ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾಕೂಟ ನಡೆಯುತ್ತಿತ್ತು. ಆ ಸಮಯದಲ್ಲಿ ಕಾಲೇಜು ಕಾರ್ಯಕ್ರಮವನ್ನು ಬಂಕ್ ಮಾಡಿದ ವಿದ್ಯಾರ್ಥಿನಿಯೊಬ್ಬಳು ಎಸ್ಟಿಡಿ ಬೂತ್‌ನಿಂದ ಅದ್ಯಾರಿಗೋ ಕರೆ ಮಾಡಿದ್ದಾಳೆ. ಮರುಕ್ಷಣವೇ ಪೆರ್ಲ ಕಡೆಯಿಂದ ಆಟೋರಿಕ್ಷಾವೊಂದು ಬಂದು ಆಕೆಯನ್ನು ಪಿಕ್ ಅಪ್ ಮಾಡಿ ಕರೆದೊಯ್ದಿದೆ. ಇದನ್ನು ದೂರದಿಂದ ಒಂದಷ್ಟು ಜನ ಗಮನಿಸಿದ್ದಾರೆ.

ನಂತರ ಸುಮಾರು 11.30 ರ ಸುಮಾರಿಗೆ ಸಾರಡ್ಕ-ಪುಣಚ ರಸ್ತೆಯ ಕೊಲ್ಲದವು ಅಡ್ಕ ಎಂಬಲ್ಲಿ ಮುಳಿಹುಲ್ಲಿನ ಗುಡ್ಡದಲ್ಲಿ ನಗ್ನಸ್ಥಿತಿಯಲ್ಲಿ ಇದೇ ಜೋಡಿ ನಾಗರಿಕರ ಕೈಗೆ ಸಿಕ್ಕಿಬಿದ್ದಿದೆ. ತಕ್ಷಣವೇ ಸ್ಥಳೀಯರು ವಿಟ್ಲ ಠಾಣೆಯ ಪೊಲಿಸರಿಗೆ ಮಾಹಿತಿ ನೀಡಲಾಗಿದೆ.

ರಿಕ್ಷಾ ಚಾಲಕ ಹಾಗೂ ವಿದ್ಯಾರ್ಥಿನಿ ಪೆರ್ಲದವರಾಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸಪ್ಪ, ಠಾಣಾಧಿಕಾರಿಗೆ ಸುದ್ಧಿ ಮುಟ್ಟಿಸದೆ ಅಥವಾ ಅವರಿಗೆ ಕನಿಷ್ಠ ಎಚ್ಚರಿಕೆ ಸಹಾ ನೀಡದೆ ಒಂದಿಷ್ಟು ಹಣ ಪಡೆದು "ಆಟೋ ಜೋಡಿ" ಓಡಿ ಹೋಗಲು ಬಿಟ್ಟಿದ್ದಾನೆ.

ತಿಂಗಳ ಹಿಂದೆ ಈ ಕಾಲೇಜಿನ ಪ್ರೇಮಿಗಳಿಬ್ಬರು ಪರಾರಿ ಕೂಡಾ ಆಗಿದ್ದರು. ಈ ಕಾಲೇಜಿನಲ್ಲಿ ಕ್ಲಾಸ್ ಬಿಡುವ ಹೊತ್ತಿಗೆ ಕೇರಳದ ವಿದ್ಯಾರ್ಥಿಗಳ ಗುಂಪೊಂದು ಅಡ್ಯನಡ್ಕ ಕಾಲೇಜು ಬಳಿ ಸುಳಿದಾಡುತ್ತಿರುವುದು ಮಾಮೂಲಿಯಾಗಿದೆ. ಆದರೆ ಶಾಲಾಭಿವೃದ್ಧಿ ಸಮಿತಿ ಮಾತ್ರ ಮೌನವಾಗಿದೆ. ಪೊಲೀಸರೂ ಕೂಡಾ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. [ಕ್ರೈಂ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+