ಬಗಾನ್ ನಿರ್ದೇಶಕ ಸ್ಥಾನಕ್ಕೆ ಮಲ್ಯ ರಾಜೀನಾಮೆ
ನವದೆಹಲಿ,
ಡಿ. 21 : ಎರಡು ವೃತ್ತಿಪರ ಫುಟ್ಬಾಲ್ ಕ್ಲಬ್ ಗಳಿಗೆ ನಿರ್ದೇಶಕರಾಗಿದ್ದ ಉದ್ಯಮಿ ವಿಜಯ ಮಲ್ಯ ಕೊನೆಗೂ ಮೋಹನ್ ಬಗಾನ್ ತಂಡದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ತಮ್ಮ ಮಗ ಸಿದ್ಧಾರ್ಥ ಮಲ್ಯ ಅವರನ್ನು ನೇಮಕಗೊಳಿಸುವಲ್ಲಿ ವಿಜಯ್ ಮಲ್ಯ ಯಶಸ್ವಿಯಾಗಿದ್ದಾರೆ. id="toptextpromo">ಮೋಹನ್
ಬಗಾನ್ ಮತ್ತು ಈಸ್ಟ್ ಬೆಂಗಾಲ್ ವೃತ್ತಿಪರ ಪುಟ್ಬಾಲ್ ಕ್ಲಬ್ ನ ಪದಾಧಿಕಾರಿಯಾಗಿದ್ದ ಮಲ್ಯ ಇದೀಗ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಎಎಫ್‌ಸಿ) ನ ನಿಯಮದಂತೆ ಮೋಹನ್ ಬಗಾನ್ ನಿರ್ದೇಶಕ ಸ್ಥಾನವನ್ನು ತೊರೆದಿದ್ದಾರೆ. ಆದರೆ, ಈಸ್ಟ್ ಬೆಂಗಾಲ್ ಕ್ಲಬ್ ನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಲ್ಯ
ನಿರ್ದೇಶಕ ಹುದ್ದೆ ತ್ಯಜಿಸಿದ ನಂತರ ಮೋಹನ್ ಬಗಾನ್ ನ ಆಡಳಿತ ಮಂಡಳಿ ಯುನೈಟೆಡ್ ಮೋಹನ್ ಬಗಾನ್ ಫುಟ್ಬಾಲ್ ಟೀಮ್ ಪ್ರೈವೇಟ್ ಲಿಮಿಟೆಡ್ ಸಭೆ ಸೇರಿ ವಿಜಯ್ ಮಲ್ಯ ಉತ್ತರಾಧಿಕಾರಿಯಾಗಿ ಅವರ ಮಗ ಸಿದ್ಧಾರ್ಥ ಮಲ್ಯನನ್ನು ಆಯ್ಕೆ ಮಾಡಿದೆ.(ವಿಜಯ್ ಮಲ್ಯ)












Click it and Unblock the Notifications