ಜಯನಗರ ಮೊದಲು, ಎಲೆಕ್ಟಾನಿಕ್ ಸಿಟಿ ಕೊನೆ: ಸಮೀಕ್ಷೆ

ಮೂಲಸೌಕರ್ಯ, ಆರೋಗ್ಯ ಅನುಕೂಲಗಳು(ಆಸ್ಪತ್ರೆ), ಮನರಂಜನೆ(ರೆಸ್ಟೋರೆಂಟ್, ಶಾಪಿಂಗ್ ಮಾಲ್ ಗಳು, ಥೇಟರ್ ಗಳು..ಇತ್ಯಾದಿ), ಆರೋಗ್ಯಕರ ಹಾಗೂ ಸುರಕ್ಷಿತ ಜೀವನ ಗುಣಮಟ್ಟ, ಶೈಕ್ಷಣಿಕ ವ್ಯವಸ್ಥೆ ಹಾಗೂ ವಸತಿ ಅನುಕೂಲಗಳ ಕುರಿತು ಜನರಿಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿರುವ ನಮ್ಮ ಬೆಂಗಳೂರಿನ ಜನರು ಜಯನಗರ ವಾಸಿಸಲು ಎಲ್ಲ ರೀತಿಯಿಂದಲೂ ಯೋಗ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಯನಗರದ ನಂತರದ ಸ್ಥಾನದಲ್ಲಿ ಕೋರಮಂಗಲ, ಇಂದಿರಾನಗರ, ಮಲ್ಲೇಶ್ವರ, ಎಚ್ ಆರ್ ಬಿಆರ್ ಲೇಔಟ್, ಜೆಪಿ ನಗರ, ಬನಶಂಕರಿ, ಬಿಟಿಎಂ ಲೇಔಟ್, ಸಿಬಿಡಿ(Central Business District) ಹಾಗೂ ಯಲಹಂಕ ಬಡಾವಣೆಗಳಿವೆ.
ಕಳೆದ ಬಾರಿ ಅಗ್ರಸ್ಥಾನದಲ್ಲಿದ್ದ ಇಂದಿರಾನಗರ ಈ ಬಾರಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಎಚ್ ಆರ್ ಬಿಆರ್ ಲೇಔಟ್, ಜಯನಗರ(ಜೆಪಿ ನಗರ ಹಾಗೂ ಬನಶಂಕರಿ ಸೇರಿ), ಮಲ್ಲೇಶ್ವರ(ಸದಾಶಿವ ನಗರ ಸೇರಿ) ಹಾಗೂ ಕೋರಮಂಗಲ ನಂತರದ ಸ್ಥಾನದಲ್ಲಿದ್ದವು. ಎಲೆಕ್ಟ್ರಾನಿಕ್ ಸಿಟಿ ಇನ್ನೂ ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿದ್ದು, ಬೆಂಗಳೂರಿಗರ ಕೋಪಕ್ಕೆ ಮತ್ತೊಮ್ಮೆ ತುತ್ತಾಗಿದೆ.











Click it and Unblock the Notifications