ಭಯೋತ್ಪಾದನೆ : ಪಾಕ್ ವಿರುದ್ಧ ಎಂಟನಿ ಆಕ್ರೋಶ
ನವದೆಹಲಿ,
ಡಿ. 16 : ಭಯೋತ್ಪಾದನಾ ನಿಗ್ರಹಕ್ಕೆ ಅಮೆರಿಕ ನೀಡುತ್ತಿರುವ ಸಹಾಯಧನವನ್ನು ಪಾಕಿಸ್ತಾನ ಭಾರತದ ವಿರುದ್ಧ ಬಳಸುವುದನ್ನು ಇಂದಿಗೂ ಮುಂದುವರಿಸಿದೆ ಎಂದು ರಕ್ಷಣಾ ಖಾತೆ ಸಚಿವ ಎ ಕೆ ಎಂಟನಿ ಆರೋಪಿಸಿದ್ದಾರೆ. id="toptextpromo">ಡಿ.16
ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಅವರ ಮಾತನಾಡುತ್ತಿದ್ದರು. ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕ ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡುತ್ತಿದೆ. ಮುಖ್ಯವಾಗಿ ತಾಲಿಬಾನ್ ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕಲು ಈ ಹಣವನ್ನು ಅಮೆರಿಕ ನೀಡುತ್ತಿದೆ. ಆದರೆ, ಪಾಕಿಸ್ತಾನ ಆ ಹಣವನ್ನು ಪಡೆದುಕೊಂಡು ಭಾರತದ ವಿರುದ್ಧ ಭಯೋತ್ಪಾದನೆ ಆರಂಭಿಸಿದೆ. ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಅಂಟನಿ ಭವರಸೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ಅಮೆರಿಕದ
ಅನುದಾನವನ್ನು ಪಾಕಿಸ್ತಾನ ಅನ್ಯ ಕಾರ್ಯ ಬಳಸುತ್ತಿರುವ ಸಂಗತಿ ಗಂಭೀರವಾಗಿದ್ದು, ಈ ಬಗ್ಗೆ ಈಗಾಗಲೇ ನಾವು ಅಮೆರಿಕದ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳುವುದಾಗಿ ಎಂಟನಿ ಹೇಳಿದರು.











Click it and Unblock the Notifications