ಕೆಎಂಎಫ್ ನಂದಿನಿ ಹಾಲು ರು.1 ಹೆಚ್ಚಳ?
ಬೆಂಗಳೂರು,
ಡಿ.16: ಪ್ರತಿ ಲೀಟರ್ ಹಾಲಿಗೆ 1 ರುಪಾಯಿ ಹೆಚ್ಚಳ ಮಾಡಲು ಕೆಎಂಎಫ್ ಗಂಭೀರ ಚಿಂತನೆ ನಡೆಸಿದೆ. ಪ್ರತಿ ಲೀಟರ್ ಗೆ 2 ರಿಂದ 3 ರು ಹೆಚ್ಚಳ ಮಾಡುವಂತೆ ರೈತರು ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ದರ ಹೆಚ್ಚಳ ಜಿಲ್ಲಾ ಪಂಚಾಯತಿ ಚುನಾವಣೆ ನಂತರ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಹೇಳಿದ್ದಾರೆ. id="toptextpromo">ಪಶು
ಆಹಾರ ದರ ಹೆಚ್ಚಳ, ಸಾಗಣೆ ವೆಚ್ಚ ಸೇರಿದಂತೆ ಹೈನುಗಾರಿಕೆ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನು 2 ರಿಂದ 3 ರುಪಾಯಿ ಹೆಚ್ಚಳ ಮಾಡುವಂತೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ರೈತರು ಕೆಎಂಎಫ್ ಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಟೋನ್ಡ್ ಹಾಲಿನ ದರ 19 ರು ಇದ್ದು 20 ರು ನೀಡಬೇಕೆಂದು ಒತ್ತಾಯಿಸಲಾಗಿದೆ. ಅದರಂತೆ ಹೋಮೋಜಿನೈಸ್ಡ್ 22 ರಿಂದ 23 ರು, ಕೆನೆಭರಿತ ಹಾಲು 26 ರಿಂದ 27ರು ಗೆ ಏರಿಸಬೇಕೆಂದು ಬೇಡಿಕೆ ಬಂದಿದೆ. id='are-slot-1' class='oiad oi-axt oiadv'> id='top-searched-articles'>ಕಳೆದ
ಏಪ್ರಿಲ್ ತಿಂಗಳಿನಲ್ಲಿ ಲೀಟರ್ ಹಾಲಿಗೆ 3 ರಿಂದ 4 ರು ಹೆಚ್ಚಳ ಮಾಡಲಾಗಿತ್ತು. ಈ ಮತ್ತೆ 2 ರಿಂದ 3 ರು. ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂಬ ಅತಂಕವಿರುವುದರಿಂದ ಸದ್ಯಕ್ಕೆ 1 ರು ಮಾತ್ರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರದೊಡನೆ ಕೆಎಂಎಫ್ ಚರ್ಚಿಸಲು ಸಾಧ್ಯವಾಗಿಲ್ಲ. ಬೆಲೆ ಹೆಚ್ಚಳವಾದರೆ ರಾಜ್ಯದ ಸುಮಾರು 20 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ನೆರವಾಗಲಿದೆ.











Click it and Unblock the Notifications