ಹುಬ್ಬಳ್ಳಿಗೆ ರಿಲಯನ್ಸ್ ಹೈ ಸ್ಪೀಡ್ ಇಂಟರ್ ನೆಟ್

ನೆಟ್ ಕನೆಕ್ಟ್ ಪ್ಲಸ್ ನ ಡೌನ್ ಲಿಂಕ್ ವೇಗ 3.1 Mbps ನಷ್ಟಿದೆ ಹಾಗೂ ಅಪ್ ಲಿಂಕ್ ವೇಗ 1.8 Mbps ಇದ್ದು ವೈರ್ ಲೆಸ್ ಬ್ರಾಡ್ ಬ್ಯಾಂಡ್ ನ ನಿಜವಾದ ಅನುಭವವನ್ನು ಗ್ರಾಹಕರಿಗೆ ನೀಡಲಿದೆ. ಸುಮಾರು 150 ನಗರಗಳಲ್ಲಿ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಿ ಸೈ ಎನಿಸಿಕೊಂಡಿರುವ ರಿಲಯನ್ಸ್ ವೈರ್ ಲೆಸ್ ಬ್ರಾಡ್ ಬ್ಯಾಂಡ್ ಸೌಲಭ್ಯವನ್ನು ಗ್ರಾಮಾಂತರ ಪ್ರದೇಶಗಳಿಗೂ ಕೊಂಡೊಯ್ಯಲು ಚಿಂತಿಸಿದೆ.
ಗ್ರಾಮೀಣ ಭಾಗಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಒದಗಿಸುವ ಸರ್ಕಾರದ ಯೋಜನೆಗೆ ಪೂರಕವಾಗಿ ನೆಟ್ ಕನೆಕ್ಟ್ ಪ್ಲಸ್ ಕಾರ್ಯ ನಿರ್ವಹಿಸಲಿದೆ ಎಂದು ರಿಲಯನ್ಸ್ ಕಮ್ಯೂನಿಕೇಷನ್ ನ ಕರ್ನಾಟಕ ವಿಭಾಗದ ಮುಖ್ಯಸ್ಥ ಸ್ವಾಮಿನಾಥನ್ ಹೇಳಿದರು.
ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೇವೆ ಇನ್ನಷ್ಟು ವಿಸ್ತಾರಗೊಳಿಸಲು ನೆಟ್ ಕನೆಕ್ಟ್ ಪ್ಲಸ್ ಅನುಕೂಲವಾಗಿದ್ದು, ಸಣ್ಣ ನಗರಗಳನ್ನು ಶೀಘ್ರದಲ್ಲೇ ವ್ಯಾಪಿಸಲಿದೆ. ಇದರ ಜೊತೆಗೆ ರಿಲಯನ್ಸ್ ನ ಪೋರ್ಟಬಲ್ ಇಂಟರ್ ನೆಟ್ ಸೇವೆ ಕೂಡಾ ಜನಪ್ರಿಯಗೊಳ್ಳಲಿದೆ ಎಂಬ ವಿಶ್ವಾಸವನ್ನು ಸ್ವಾಮಿನಾಥನ್ ವ್ಯಕ್ತಪಡಿಸಿದರು.











Click it and Unblock the Notifications