ಮಂಡ್ಯ ಪೊಲೀಸರ ಆಸ್ತಿ ವಿವರ ವೆಬ್ ನಲ್ಲಿ ಲಭ್ಯ
ಮಂಡ್ಯ,
ಡಿ.14: ಮಂಡ್ಯ ಜಿಲ್ಲಾ ಪೊಲೀಸ್ ಸಿಬ್ಬಂದಿಗಳು ತಮ್ಮ ಆಸ್ತಿ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಬಹಿರಂಗ ಪಡಿಸಲು ಸಿದ್ಧತೆ ನಡೆಸಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಇದೇ ಪ್ರಥಮ ಬಾರಿಗೆ ಇಂಥ ಉತ್ತಮ ಕಾರ್ಯ ನಡೆಯುತ್ತಿದ್ದು, ಆಸ್ತಿ ವಿವರ ಸಂಗ್ರಹಣೆ ಕಾರ್ಯದಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಜನವರಿ ಅಂತ್ಯದೊಳಗೆ ಪೂರ್ಣ ವಿವರ ಸಿಗಲಿದೆ ಎಂದು ಜಿಲ್ಲಾ ಎಸ್ಪಿ ಕೌಶಲೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. id="toptextpromo">ಪೇದೆಯಿಂದ
ಹಿಡಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರೆಗೂ ಎಲ್ಲಾ ಸಿಬ್ಬಂದಿಗಳ ಆಸ್ತಿ ವಿವರ ವೆಬ್ ಸೈಟ್ ನಲ್ಲಿ ಲಭ್ಯಅಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೌಶಲೇಂದ್ರ ಅವರು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಪಂಚಾಯಿತಿ
ಚುನಾವಣೆ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಜನವರಿ ತಿಂಗಳ ಅಂತ್ಯಕ್ಕೆ ವೆಬ್ ಪೂರ್ಣ ವಿವರಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಸದ್ಯಕ್ಕೆ ಆಸ್ತಿ ವಿವರ ಸಂಗ್ರಹಿಸಲಾಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಇದರ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಸ್ವಂತ ಬ್ಲಾಗ್ ಸಹ ಹೊಂದಿರುವ ಎಸ್ ಪಿ ಕೌಶಲೇಂದ್ರ ಕುಮಾರ್ ಅವರ ಕ್ರಮಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಸಹಕರಿಸುತ್ತಿದ್ದಾರೆ.











Click it and Unblock the Notifications