ಟೈಮ್ ಪತ್ರಿಕೆ ಟಾಪ್ 10 ರಲ್ಲಿ ಸಚಿನ್ 200

Sachi 200, Time Magazine's Top 10
ಲಂಡನ್, ಡಿ.13: ಕ್ರಿಕೆಟ್ ದಂತಕತೆ ಭಾರತೀಯ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ದ್ವಿಶತಕ ಟೈಮ್ಸ್ ನಿಯತಕಾಲಿಕದಲ್ಲಿ ಸ್ಥಾನ ಪಡೆದಿದೆ. ಟೈಮ್ಸ್ ನಿಯತಕಾಲಿಕ ಈ ವರ್ಷದ ಕ್ರೀಡಾ ಕ್ಷೇತ್ರದ 10 ಅದ್ಭುತ ಕ್ಷಣಗಳನ್ನು ಪ್ರಕಟಿಸಿದೆ. ಅದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಗಳಿಸಿದ ದ್ವಿಶತಕವೂ ಸೇರಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬ ಗಳಿಸಿರುವ ಅತಿ ಹೆಚ್ಚಿನ ವೈಯಕ್ತಿಕ ಮೊತ್ತವಾಗಿದೆ.

ಕ್ರೀಡಾಲೋಕದ ಕೆಲವೊಂದು ದಾಖಲೆಗಳನ್ನು ಮುರಿಯುವುದು ಕಷ್ಟ ಎನಿಸಿಬಿಡುತ್ತದೆ. ಸಚಿನ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ್ದಾರೆ. ಅಷ್ಟರವರೆಗೆ ಯಾವುದೇ ಕ್ರಿಕೆಟಿಗ ಇಷ್ಟು ಸಾಧನೆ ಮಾಡಿರಲಿಲ್ಲ ಎಂದು ದಿ ಟೈಮ್ಸ್ ತಿಳಿಸಿದೆ.

ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿರುವ ಸಚಿನ್ ಈ ಸಾಧನೆಯನ್ನು ಫೆಬ್ರುವರಿಯಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಮಾಡಿದ್ದರು. ಅವರು ಗ್ವಾಲಿಯರ್‌ನಲ್ಲಿ 199 ರನ್ ಗಳಿಸಿದ್ದಾಗ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಅಬ್ಬರ ಹೇಳತೀರದು. ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದರು. ಇತಿಹಾಸವೊಂದಕ್ಕೆ ಸಾಕ್ಷಿಯಾಗಿದ್ದರು. ಸಚಿನ್ ಒಂದು ರನ್ ಗಳಿಸಿ 200 ರನ್ ತಲುಪಿದ್ದರು. ವಿಶ್ವ ಕ್ರಿಕೆಟ್‌ನ ಯಾವುದೇ ಅಭಿಮಾನಿ ಈ ಕ್ಷಣವನ್ನು ಮರೆಯಲಾರರು ಎಂದು ಟೈಮ್ಸ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+