ಎಂಜಿ ರಸ್ತೆ ಈಗ ಸಾರ್ವಜನಿಕ ಸಂಚಾರಕ್ಕೆ ಮುಕ್ತ

ಶನಿವಾರ ಹಾಗೂ ಭಾನುವಾರದಂದು ಮೆಟ್ರೋ ಕಾಮಗಾರಿಯಿಂದಾಗಿ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಗೆ ಕಬ್ಬನ್ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಬಳಸಿ ಹೋಗಲು ಮುಂಚಿತವಾಗಿ ಸೂಚನೆ ನೀಡಲಾಗಿತ್ತು. ಆದರೆ, ಬಹುತೇಕ ಮಂದಿ ಎಂಜಿರಸ್ತೆ ಮುಚ್ಚಿರುವುದು ತಿಳಿಯದೆ ಪರದಾಡುತ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೂರ್ವ ಸಂಚಾರಿ ವಿಭಾಗದ ಉಪ ಆಯುಕ್ತ ಬಿಎ ಮುತ್ತಣ್ಣ, ಟಿವಿ, ಪತ್ರಿಕೆ ಹಾಗೂ ಎಸ್ ಎಂಎಸ್ ಮೂಲಕ ಮುಂಚಿತವಾಗಿ ವಿವರ ನೀಡಲಾಗಿತ್ತು. ಇಂದು ಕೂಡಾ ಸಂಚಾರಕ್ಕೆ ಮುಕ್ತವಾಗಿದೆ ಎಂದು ಮಾಹಿತಿಯನ್ನು ಎಸ್ ಎಂಎಸ್ ಮೂಲಕ ಟ್ರಾಫಿಕ್ ಕಂಟ್ರೋಲ್ ರೂಂನಿಂದ ಕಳಿಸಲಾಗಿದೆ. ಜನರು ಸ್ವಲ್ಪ ಸಹಕರಿಸಿದರೆ ಸಂಚಾರ ಗೊಂದಲ ಉಂಟಾಗುವುದಿಲ್ಲ ಎಂದರು.
ಆದರೆ, ಈ ಬಗ್ಗೆ ಯಾವುದೆ ಮಾಹಿತಿ ಇಲ್ಲದ ಆಟೋ ಚಾಲಕರು ಚರ್ಚ್ ಸ್ಟ್ರೀಟ್ ನಿಂದ ಮಲ್ಯ ಆಸ್ಪತ್ರೆ ಕಡೆಗೆ ಬರೋದಕ್ಕೆ ಪರದಾಡಿದ್ದಾರೆ. ನಿಧಾನ ಗತಿಯಿಂದ ಚಲಿಸಿ ಸುಮಾರು 45 ನಿಮಿಷ ನಂತರ ಕಾರ್ಪೊರೇಷನ್ ಹತ್ತಿರ ತಲುಪಿದ್ದಾರೆ. ರೆಸಿಡೆನ್ಸಿ ರಸ್ತೆ, ಕಬ್ಬನ್ ರಸ್ತೆ, ಕಾಮರಾಜ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಸುತ್ತಾ ಮುತ್ತಾ ಅಧಿಕವಾಗಿದ್ದ ಸಂಚಾರ ದಟ್ಟಣೆಯನ್ನು ಸರಿಪಡಿಸಲು ಟ್ರಾಫಿಕ್ ಪೊಲೀಸರು ಸಾಕಷ್ಟು ಬೆವರು ಹರಿಸಿದ್ದಾರೆ. ಇನ್ನೊಂದೆಡೆ ನಿಗದಿತ ಅವಧಿಯಲ್ಲಿ ಮೆಟೋ ರೈಲು ಓಡಿಸುವ ಗುರಿ ಹಿಂದೆ ಬಿಎಂಆರ್ ಸಿಎಲ್ ಬಿದ್ದಿದೆ.












Click it and Unblock the Notifications