ಮಡೆಸ್ನಾನ : ಪ್ರತಿಭಟನೆಗೆ ಭಕ್ತರಿಂದಲೇ ವಿರೋಧ
ಕುಕ್ಕೆ
ಸುಬ್ರಮಣ್ಯ, ಡಿ. 11 : ತೀವ್ರ ಚರ್ಚೆ ಮತ್ತು ವಿವಾದಕ್ಕೆ ಒಳಗಾಗಿದ್ದ ಮಡೆಸ್ನಾನ ಸೇವೆ (ಉರುಳು ಸೇವೆ) ಕೆಲವೊಂದು ಸಾಂಕೇತಿಕ ಪ್ರತಿಭಟನೆಯ ನಡುವೆಯೂ ಸಾಂಗವಾಗಿ ನೆರವೇರಿತು. ನಿವೃತ್ತ ನ್ಯಾಯಾಧೀಶ, ವೈದ್ಯ, ಎಂಜಿನಿಯರ್, ಪೊಲೀಸರೂ ಸೇವೆ ಸಲ್ಲಿಸಿದರೆ ಪ್ರತಿಭಟನೆಗೆ ಭಕ್ತವೃಂದದಿಂದಲೇ ವಿರೋಧ ವ್ಯಕ್ತವಾಯಿತು. id="toptextpromo">ಪ್ರತಿಭಟನೆ
ಮತ್ತು ಜಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನೀಡಲಾಗಿತ್ತು. ಬೆಂಗಳೂರಿನಿಂದ ಬಂದ ಭಕ್ತರೊಬ್ಬರು ಈ ಸೇವೆಯನ್ನು ಯಾರ ಒತ್ತಾಯಕ್ಕಾಗಿ ಮಾಡುವುದಲ್ಲ, ಬದಲಾಗಿ ಮನಶಾಂತಿಗಾಗಿ ಇದನ್ನು ಮಾಡುತ್ತಿದ್ದೇವೆ ಎಂದು ಪ್ರತಿಭಟನೆಗೆ ಭಕ್ರು ವಿರೋಧ ವ್ಯಕ್ತಪಡಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭದ್ರತಾ ಕಾರ್ಯಕ್ಕಾಗಿ ನಿಯೋಜಿತರಾಗಿದ್ದ ಕೆಲವು ಪೊಲೀಸ್ ಸಿಬ್ಬಂದಿಯೇ ಉರುಳು ಸೇವೆ ಮಾಡಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು. id='are-slot-1' class='oiad oi-axt oiadv'> id='top-searched-articles'>ಅನಾದಿಕಾಲದಿಂದಲೂ
ನಂಬಿಕೊಂಡು ಬಂದಂತಹ ಉರುಳು ಸೇವೆಗೆ ವಿರೋಧ ವ್ಯಕ್ತವಾಗಿರುವುದು ಕೇಳಿ ಕೆಲ ಭಕ್ತರು ಅಸಮಾದಾನ ವ್ಯಕ್ತಪಡಿಸಿದರು. ಉರುಳು ಸೇವೆಯಿಂದ ಮೈಮೇಲಿನ ರೋಗ ವಾಸಿಯಾಗುತ್ತದೆ ಎಂದು ಹಿರಿಯರು ನಂಬಿಕೊಂಡು ಬಂದಂತಹ ಪದ್ಧತಿ ಇದು ಎಂದು ಪ್ರತಿಭಟನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರು.











Click it and Unblock the Notifications