ಮದರ್ ತೆರೆಸಾ ಸ್ಮರಣಾರ್ಥ ರೂ.5 ನಾಣ್ಯ ಬಿಡುಗಡೆ
ಮುಂಬೈ,
ಡಿ.9: ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೆಸಾರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರು..5ರ ನಾಣ್ಯ ಬಿಡುಗಡೆ ಮಾಡಲು ನಿರ್ಧರಿಸಿದೆ. id="toptextpromo">23
ಮಿ.ಮಿ ವ್ಯಾಸದ ಮದರ್ ತೆರೆಸಾರ ಮುಖ ಹೊತ್ತ ದುಂಡನೆಯ ರು..5ರ ನಾಣ್ಯವನ್ನು ಶೀಘ್ರದಲ್ಲಿಯೇ ಚಲಾವಣೆಗೆ ತರಲಾಗುವುದು. ಪ್ರಸ್ತುತವಿರುವ ರು.5ರ ನಾಣ್ಯದ ಚಲಾವಣೆ ಕೂಡಾ ಮುಂದುವರೆಯಲಿದೆ ಈ ಬಗ್ಗೆ ಅಧಿಕೃತ ಪ್ರಕಟಣೆ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಮಿಷನರೀಸ್
ಆಫ್ ಚಾರಿಟಿಸ್ ನ ಸಂಸ್ಥಾಪಕಿಯಾಗಿದ್ದ ಮದರ್ ತೆರೆಸಾ ಜನಿಸಿದ್ದು ಆಗಸ್ಟ್ 26, 1910ರಂದು ರಿಪಬ್ಲಿಕ್ ಆಫ್ ಮೆಸಿಡೋನಿಯಾದಲ್ಲಿ. ತೆರೆಸಾ ಅವರ ಮೂಲ ಹೆಸರು ಎಗ್ನೇಸ್ ಗೊನ್ ಕ್ಸಾ ಬೊಜಕ್ಸಿಯೋ(Agnes Gonxha Bojaxhiu). ಭಾರತಕ್ಕೆ ಆಗಮಿಸಿ ಅನಾಥ, ಅನಾರೋಗ್ಯ ಪೀಡಿತರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.











Click it and Unblock the Notifications