ಬೆಂಗ್ಳೂರು ಹುಡ್ಗಿಗೆ ಮಿಸ್ ಅರ್ಥ್ ಕಿರೀಟ

Model Nicole Faria
ನಾ ಟ್ರಾಂಗ್(ವಿಯೆಟ್ನಾಂ), ಡಿ.5: ಬೆಂಗಳೂರಿನ 20 ವರ್ಷದ ಬೆಡಗಿ ನಿಕೋಲೆ ಫೆರಿಯಾಗೆ ಈ ಬಾರಿಯ ಮಿಸ್ ಅರ್ಥ್ ಕಿರೀಟ ಧರಿಸಿದ್ದಾರೆ. ವಿವಿಧ ದೇಶಗಳ ಸುಮಾರು 82 ಸ್ಪರ್ಧಿಗಳನ್ನು ಹಿಂದಿಕ್ಕಿ, ನಿಕೋಲೆ ಈ ಪ್ರಶಸ್ತಿಯನ್ನು ಗಳಿಸಿದ್ದಾರೆ. ಮಿಸ್ ಅರ್ಥ್ ಗೆದ್ದಿರುವ ಈಕೆ ಇನ್ಮುಂಡೆ ಮಿಸ್ ಅರ್ಥ್ ಪ್ರತಿಷ್ಠಾನ, ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಫೆರಿಯಾ ಈಗಾಗಲೇ ಮಿಸ್ ಅರ್ಥ್ ಟಾಲೆಂಟ್, ಮಿಸ್ ಸೌತ್ ಇಂಡಿಯಾ ಅರ್ಥ್, ಮಿಸ್ ಇಂಡಿಯಾ ಅರ್ಥ್ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ಮಿಸ್ ಅರ್ಥ್ 2010 ಪ್ರಶಸ್ತಿ ಸಮಾರಂಭದ ಯಶಸ್ಸಿನೊಂದಿಗೆ ವಿಯೆಟ್ನಾಂನ ಪ್ರವಾಹ ಸಂತ್ರಸ್ತರಿಗೆ ಅಪಾರ ದೇಣಿಗೆ ಹಣ ಹರಿದು ಬಂದಿದೆ.

ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿನಿಯಾಗಿರುವ ಬೆಂಗಳೂರಿನ ಹುಡ್ಗಿ ಫೆರಿಯಾ, ಅಂತಿಮ ಸುತ್ತಿನಲ್ಲಿ ಜಡ್ಜ್ ಗಳ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸಿದರು. ನೀರು ಹಾಗೂ ಗಾಳಿಯನ್ನು ಸಂರಕ್ಷಿಸಬೇಕಾದರೆ ನಿಮ್ಮ ಪ್ರಥಮ ಆದ್ಯತೆ ಯಾವುದಕ್ಕೆ ನೀಡುತ್ತೀರಾ ಎಂಬ ಪ್ರಶ್ನೆಗೆ, ಎರಡು ಕೂಡಾ ಮನುಷ್ಯರಿಗೆ ಅತ್ಯಮೂಲ್ಯವಾದವು. ನಾನು ಮೊದಲು ಜೀವಜಲವನ್ನು ಸಂರಕ್ಷಿಸಿ ಮಕ್ಕಳಿಗಾಗಿ ಕಾಯ್ದಿಡುತ್ತೇನೆ ಎಂದು ನಿಕೋಲೆ ಉತ್ತರಿಸಿದರು.

ಈಕ್ವಾಡರ್ ನ ಜೆನ್ನಿಫರ್ ಮಿಸ್ ಅರ್ಥ್ ಏರ್, ಥೈಲ್ಯಾಂಡ್ ನ ರೂಪದರ್ಶಿ ವಾಟ್ಸಾಂಪಾರ್ನ್ ವಟ್ಟಾನಕೂನ್ ಮಿಸ್ ಅರ್ಥ್ ವಾಟರ್ ಹಾಗೂ ಪೋರ್ಟೋ ರಿಕೋ ರೂಪದರ್ಶಿ ಯೇಡಿ ಬೋಸ್ಕಾಸ್ ಮಿಸ್ ಫೈರ್ ಆಗಿ ಆಯ್ಕೆಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+