Get Updates
Get notified of breaking news, exclusive insights, and must-see stories!

ಸ್ವೀಡನ್ ಸರ್ವರಲ್ಲಿ ವಿಕಿಲೀಕ್ಸ್ ಇನ್ನೂ ಜೀವಂತ!

Wikileaks founder Julian Assange
ವಾಷಿಂಗ್ಟನ್, ಡಿ. 03 : ಅಮೆರಿಕಾದ ರಹಸ್ಯ ದಾಖಲೆಗಳನ್ನು ಬಟಾಬಯಲುಗೊಳಿಸಿ ವೈರಿಗಳನ್ನು ಮತ್ತು ಜಾಗತಿಕವಾಗಿ ಅಪಾರ ಸ್ನೇಹಿತರನ್ನು ಸಂಪಾದಿಸಿರುವ ವಿಕಿಲೀಕ್ಸ್ ಅಂತರ್ಜಾಲದ ಸಂಸ್ಥಾಪಕ ಜೂಲಿಯನ್ ಅಸ್ಸೇಂಜ್ ವೆಬ್ ಸೈಟ್ ವಿಳಾಸವನ್ನು ಬದಲಾಯಿಸಿಕೊಂಡಿದ್ದಾರೆ.

ಅಮೆರಿಕಾಕ್ಕೆ ಮುಜುಗರ ತಂದ ನಂತರ ವಿಕಿಲೀಕ್ಸ್ ತಾಣವನ್ನು ಹೋಸ್ಟ್ ಮಾಡಿದ್ದ ಅಮೆಜಾನ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿತು. ಕೆಲ ಗಂಟೆಗಳ ಕಾಲ ವಿಕಿಲೀಕ್ಸ್ ತಾಣ http://www.wikileaks.com/ ಜಾಲಿಗರಿಗೆ ಲಭ್ಯವಾಗಿರಲಿಲ್ಲ. ಆದರೆ, ಸ್ವೀಡನ್ನಿಸ ಸರ್ವರನ್ನು ಹುಡುಕಿಕೊಂಡಿರುವ ಜೂಲಿಯನ್ http://213.251.145.96/ ವಿಳಾಸದಲ್ಲಿ ಭ್ರಷ್ಟಾಚಾರವನ್ನು ಹೊರಗೆಳೆಯುವ ತಮ್ಮ ಕಾಯಕವನ್ನು ಮುಂದುವರಿಸಿದ್ದಾರೆ.

ನವೆಂಬರ್ 28ರಂದು ಎರಡೂವರೆ ಲಕ್ಷಕ್ಕೂ ಹೆಚ್ಚಿನ ಅಮೆರಿಕಾದ ರಹಸ್ಯ ದಾಖಲೆಗಳನ್ನು ಪ್ರಕಟಿಸಿ ಪೆಂಟಗನ್ ಕೆಂಗಣ್ಣಿಗೆ ಜೂಲಿಯನ್ ಗುರಿಯಾಗಿದ್ದಾರೆ. ಇತರ ರಾಷ್ಟ್ರಗಳೊಡನೆ ಅಮೆರಿಕಾ ನಡೆಸಿರುವ ಅನೇಕ ರಹಸ್ಯ ಕಾರ್ಯಾಚರಣೆಗಳನ್ನು ವಿಕಿಲೀಕ್ಸ್ ಬಯಲು ಮಾಡಿದೆ.

ಈ ರಹಸ್ಯ ದಾಖಲೆಗಳ ಸೋರಿಕೆಯಿಂದ ತಲ್ಲಣಗೊಂಡಿರುವ ಅಮೆರಿಕಾದ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಅಫಘಾನಿಸ್ತಾನ, ಪಾಕಿಸ್ತಾನ ಸೇರಿದಂತೆ ಸುಮಾರು 12 ರಾಷ್ಟ್ರಗಳ ನಾಯಕರುಗಳೊಂದಿಗೆ ಮಾತನಾಡಿದ್ದು, ವಿಕಿಲೀಕ್ಸ್ ಹಗರಣ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಆಯಾ ದೇಶಗಳೊಂದಿಗೆ ಸಂಬಂಧ ಮತ್ತಷ್ಟು ಬಲಪಡಿಸುವ ಬಗ್ಗೆ ಒತ್ತಿಹೇಳಿದ್ದಾರೆ. ಅಮೆರಿಕಾದ ರಹಸ್ಯ ಬಯಲಾದದ್ದು ಅಮೆರಿಕಾದ ಮೇಲೆ ಮಾತ್ರವಲ್ಲ ಇಡೀ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಆಕ್ರಮಣ ಮಾಡಲಾಗಿದೆ ಎಂದು ಹಿಲರಿ ಬಣ್ಣಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+