ನ್ಯೂಟ್ರಾನ್ ಬಾಂಬ್ ಸಂಶೋಧಕ ನಿಧನ
ಲಾಸ್
ಏಂಜಲೀಸ್, ಡಿ. 2 : ಜಗತ್ತಿಗೆ ಮಾರಕವಾಗಿರುವ ನ್ಯೂಟ್ರಾನ್ ಬಾಂಬ್ ಗಳ ಸಂಶೋಧಕ ಸ್ಯಾಮುವೆಲ್ ಕೋಹೆನ್ ಅವರು ಲಾಸ್ ಏಂಜಲೀಸ್ ನಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. id="toptextpromo">ಸ್ಯಾಮುವೆಲ್
ಕೋಹೆನ್ 1958ರಲ್ಲಿ ಅಣ್ವಸ್ತ್ರವನ್ನು ವಿನ್ಯಾಸಗೊಳಿಸಿದ್ದರು. ಕೋಹೆನ್ ಜಠರ ಕ್ಯಾನ್ಸರ್ ನಿಂದಾಗಿ ರವಿವಾರ ನಿಧನ ಹೊಂದಿರುವುದಾಗಿ ಅವರ ಮಗ ಪಾಲ್ ಕೋಹೆನ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗುವ ನ್ಯೂಟ್ರಾನ್ ಬಾಂಬ್ ಗಳು ಅಣುಬಾಂಬ್ ಗಳಿಗೆ ಹೋಲಿಸಿದಲ್ಲಿ ಕಡಿಮೆ ಹಾನಿ ಉಂಟು ಮಾಡುತ್ತವಾದರೂ, ಮಾನವರನ್ನು ಸಾಯಿಸುವ ಸಾಮರ್ಥ್ಯವನ್ನು ಹೊಂದಿವೆ. id='are-slot-1' class='oiad oi-axt oiadv'> id='top-searched-articles'>ಅಮೆರಿಕ
ಈ ಅಣ್ವಸ್ತ್ರಗಳನ್ನು 1980ರಲ್ಲಿ ಅಭಿವೃದ್ಧಿಪಡಿಸಿದೆ. ನ್ಯೂಯಾರ್ಕ್ ನಿವಾಸಿಯಾಗಿದ್ದ ಕೋಹೆನ್ ಮಸಾಚುಶೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರ ಅಧ್ಯಯನ ನಡೆಸಿದ್ದಾರೆ. ಜಪಾನ್ ನ ನಾಗಸಾಕಿಯ ಮೇಲೆ ಎಸೆಯಲಾದ ಅಣುಬಾಂಬ್ ರಚಿಸುವಲ್ಲಿ ನೆರವಾಗಿದ್ದರು ಲಾಸ್ ಎಂಜಲೀಸ್ ಟೈಮ್ಸ್ ವರದಿ ಮಾಡಿದೆ.











Click it and Unblock the Notifications