26/11: ಸ್ಪೇನ್ ನಲ್ಲಿ 8 ಶಂಕಿತ ಉಗ್ರರ ಬಂಧನ
ಬಾರ್ಸಿಲೋನಾ,
ಡಿ.1: 2008ರ ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಎಂಟು ಮಂದಿ ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದೆ. ಬಂಧಿತರದಲ್ಲಿ ಏಳು ಮಂದಿ ಪಾಕಿಸ್ತಾನಿಯರು ಹಾಗೂ ಒಬ್ಬ ಉತ್ತರ ಆಫ್ರಿಕಾದ ವ್ಯಕ್ತಿ ಇದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. id="toptextpromo">ಏಳು
ಮಂದಿ ಪಾಕಿಸ್ತಾನಿಯರನ್ನು ಮಂಗಳವಾರ ಬಂಧಿಸಲಾಗಿದ್ದು, ಒಬ್ಬ ಉತ್ತರ ಆಫ್ರಿಕಾದ ವ್ಯಕ್ತಿಯನ್ನು ಬುಧವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಎಂಟು ಮಂದಿ ನಕಲಿ ಗುರುತು ಪತ್ರ ಹೊಂದಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ಶಂಕಿತ
ಆರೋಪಿಗಳು ಲಷ್ಕರ್ ಇ ತೊಯ್ಬಾ ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಹಣಕಾಸು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿರವಾನಿಸುತ್ತಿದ್ದರು. 2008 ನವೆಂಬರ್ ಮುಂಬೈ ಮೇಲೆ ನಡೆದ ದಾಳಿಗೆ ಕೂಡಾ ಇಲ್ಲಿಂದಲೇ ಹಣ ರವಾನಿಸಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಆದರೆ, ಶಂಕಿತ ಭಯೋತ್ಪಾದಕರ ಬಂಧನದ ಕುರಿತು ಸ್ಪೇನ್ ಸರ್ಕಾರದ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ಇನ್ನೂ ನೀಡಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. [ವಿಡಿಯೋ ವೀಕ್ಷಿಸಿ]











Click it and Unblock the Notifications