ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಐಪ್ಯಾಡಿನಲ್ಲಿ ದಟ್ಸ್ ಕನ್ನಡ ವಿರಾಜಮಾನ

By Prasad
|
Google Oneindia Kannada News

Apple iPad supports thatsKannada
ಅಂತೂ ಇಂತೂ ಆಪಲ್ ಐಪ್ಯಾಡ್ ನಲ್ಲಿಯೂ ದಟ್ಸ್ ಕನ್ನಡದ ಸವಿರುಚಿ ತುಂಬಿಕೊಂಡಿದೆ. ಡೆಸ್ಕ್ ಟಾಪ್ ಮತ್ತು ಮೊಬೈಲನ್ನು ಬದಿಗೆ ಸರಿಸಿ ಜಾಗತಿಕವಾಗಿ ಅನೇಕರ ಕೈಯಲ್ಲಿ ನಲಿದಾಡುತ್ತಿರುವ ಆಪಲ್ ಐಪ್ಯಾಡ್ ಗೆ ಇಲ್ಲಿಯವರೆಗೂ ಪ್ರಾದೇಶಿಕ ಭಾಷೆಯೆಂದರೆ ಅಲರ್ಜಿಯಾಗಿತ್ತು. ಕನ್ನಡ ಓದುವುದಕ್ಕೆ ಎದುರಾಗುತ್ತಿದ್ದ ಒಡೆದ ಅಕ್ಷರಗಳು, ಇತರ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿದ್ದು ಅಂಗೈಯಲ್ಲಿ ವಿರಾಜಮಾನವಾಗಿರುವ ಐಪ್ಯಾಡ್ ನ ಸ್ಕ್ರೀನ್ ಮೇಲೆ ಕನ್ನಡ ಅಕ್ಷರಗಳನ್ನು ನೋಡುತ್ತಲೇ ಕನ್ನಡ ಪ್ರಿಯರ ಎದೆ ಕುಣಿದಾಡುವುದು.

ಈಗಾಗಲೇ ದಟ್ಸ್ ಕನ್ನಡ ಸುದ್ದಿಗಳು ಮೊಬೈಲ್ ಮೂಲಕ ವಿಶ್ವ ಕನ್ನಡಿಗರನ್ನು ತಲುಪುತ್ತಿವೆ. ಐಪ್ಯಾಡ್ ಕ್ರಾಂತಿ ಆರಂಭವಾದಂದಿನಿಂದ ಅದರಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಸುದ್ದಿಯನ್ನು ಓದಲಾಗದೆ ಲಕ್ಷಾಂತರ ಜನರು ಚಟಪಡಿಸುತ್ತಿದ್ದರು. ಒನ್ ಇಂಡಿಯಾ ಕನ್ನಡ ಪೋರ್ಟಲ್ ಬಳಕೆದಾರರಲ್ಲಿ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಎಲ್ಲೇ ಇರು ಹೇಗೇ ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ, ಕಾರಲ್ಲೇ ಇರಲಿ, ಬೈಕಲ್ಲೇ ಇರಲಿ, ಕಾಫಿ ಶಾಪ್ ನಲ್ಲಿರಲಿ, ಪಬ್ ನಲ್ಲಿರಲಿ, ಎಲ್ಲೇ ಇದ್ದರೂ ಕನ್ನಡವನ್ನು ಐಪ್ಯಾಡ್ ನಲ್ಲಿ ಓದಲಾಗದೆ ಕನ್ನಡಿಗರು ಪರಿತಪಿಸುತ್ತಿದ್ದರು. ಈಗ ಈ ಎಲ್ಲ ಚಟಪಡಿಕೆಗೆ ಪೂರ್ಣವಿರಾಮ ಬಿದ್ದಿದೆ.

ಐಪ್ಯಾಡ್ ನಲ್ಲಿ ಅಗತ್ಯವಿರುವ ಕೆಲ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡರೆ ಐಪ್ಯಾಡ್ ನಲ್ಲಿ ಕನ್ನಡ ಓದುವ ಅದ್ಭುತವಾದ ಹೊಸ ಅನುಭವಕ್ಕೆ ಬಳಕೆದಾರರು ತೆರೆದುಕೊಳ್ಳಬಹುದು. ಆಪಲ್ ಐಪ್ಯಾಡ್ ಗಾಗಿ ನವೆಂಬರ್ 22, 2010 ರಂದು ಬಿಡುಗಡೆ ಮಾಡಿರುವ ಆಪರೇಟಿಂಗ್ ಸಿಸ್ಟಂ ಹೊಸ ವರ್ಷನ್ iOS 4.2.1 ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತಿದೆ. ಈ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್ ಗ್ರೈಡ್ ಮಾಡಿಕೊಳ್ಳಲು iTunes 10.1 ಇರಬೇಕು.

ಹೀಗೆ ಮಾಡಿರಿ

1) ಹೊಸ ಆಪರೇಟಿಂಗ್ ಸಿಸ್ಟಂ iOS 4.2.1ಗೆ ಅಪ್ ಗ್ರೇಡ್ ಮಾಡಿಕೊಳ್ಳಿರಿ.
2) ಅದು ಸಾಧ್ಯವಾಗದೇ ಇದ್ದರೆ, ಐಟ್ಯೂನ್ಸ್, ಕ್ವಿಕ್ ಟೈಮ್ ಗಳನ್ನು ಅನ್ ಇನ್ ಸ್ಟಾಲ್ ಮಾಡಿರಿ.
3) ಈಗಲೂ iOS 4.2.1 ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಫೈರ್ ವಾಲ್ ಮತ್ತು ಆಂಟಿ ವೈರಸ್ ಡಿಸೇಬಲ್ ಮಾಡಿರಿ ಮತ್ತು ಡೌನ್ ಲೋಡ್ ಮುಂದುವರಿಸಿ.
4) ಹೊಸ ಓಎಸ್ ಡೌನ್ ಲೋಡ್ ಆದನಂತರ ಅಪ್ ಗ್ರೇಡ್ ಸರಾಗ.

ಮುಂದ? ಆಪಲ್ ಐಪ್ಯಾಡಲ್ಲಿ ನಮ್ಮ ಅಂತರ್ಜಾಲ ಪತ್ರಿಕೆಯನ್ನು ಓದುವ ಸುಖ ನಿಮ್ಮದು ಮತ್ತು ನಿಮ್ಮ ಪರಿವಾರದ್ದು.

English summary
At last we have Apple with Indian flavor. Now, Apple iPad supports all indian languages including Kannada. It is possible to read any of the indian language sites on their apple iPad by downloading and installing new OS released by Apple iOS 4.2.1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X