ಕೈಗಾದ 4ನೇ ಅಣು ವಿದ್ಯುತ್ ಘಟಕ ರಾಷ್ಟ್ರಕ್ಕೆ ಅರ್ಪಣೆ

ಕೈಗಾದ ನಾಲ್ಕನೇ ಘಟಕ ದೇಶದ 20ನೇ ಅಣು ರಿಯಾಕ್ಟರ್ ಆಗಿದ್ದು, 20ಕ್ಕೂ ಹೆಚ್ಚು ಅಣು ರಿಯಾಕ್ಟರ್ ಹೊಂದಿರುವ ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಅಮೆರಿಕ, ಫ್ರಾನ್ಸ್, ಜಪಾನ್, ರಷ್ಯಾ ಮತ್ತು ರಿಪಬ್ಲಿಕ್ ಆಫ್ ಕೊರಿಯಾ ಈ ಪಟ್ಟಿಯಲ್ಲಿರುವ ಇತರ ಪ್ರತಿಷ್ಠಿತ ರಾಷ್ಟ್ರಗಳು.
ಅಣು ಶಕ್ತಿ ನಿಯಂತ್ರಣಾ ಮಂಡಳಿಯಿಂದ ಡಿಸೆಂಬರ್ ತಿಂಗಳಲ್ಲಿ ನಿರ್ದಿಷ್ಟ ಪರೀಕ್ಷೆಗಳನ್ನು ನಡೆದ ನಂತರ ಈ ಘಟಕದಲ್ಲಿ ವಾಣಿಜ್ಯ ಬಳಕೆಗಾಗಿ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ ಎಂದು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಘಟಕದ ಆರಂಭದಿಂದಾಗಿ ಭಾರತದ ಅಣು ವಿದ್ಯುತ್ ಆಯೋಗ ಜಾಗತಿಕವಾಗಿ ಅಣು ರಿಯಾಕ್ಟರ್ ಸ್ಥಾಪಿಸುವ ಸಮರ್ಥ್ಯ ಹೊಂದಿರುವ ಸಂಸ್ಥೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದ್ದು, ಅಣು ವಿದ್ಯುತ್ ಉತ್ಪಾದಿಸುವ ಪರಿಣತಿಯನ್ನು ಇತರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ ಹೇಳಿದರು.
ಕೇಂದ್ರ ಸರಕಾರದ ಅನುಮತಿ ದೊರೆತ ನಂತರ ಕೈಗಾದಲ್ಲಿ 700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಇನ್ನೂ ಎರಡು ಘಟಕಗಳನ್ನು, ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಮತ್ತು ಕಡಿಮೆ ಖರ್ಚಿನಲ್ಲಿ ಸ್ಥಾಪಿಸಲಾಗುವುದು ಎಂದು ಬ್ಯಾನರ್ಜಿ ನುಡಿದರು.












Click it and Unblock the Notifications