ಸ್ಯಾಮ್ ಸಂಗ್ ನಿಂದ ಹೊಸ ಸ್ಮಾರ್ಟ್ ಫೋನ್ ವೇವ್

ವೇವ್ 525 ಹಾಗೂ ವೇವ್ 723 ಮೊಬೈಲ್ ಫೋನ್ ಗಳಲ್ಲಿ ಸ್ಯಾಮ್ ಸಂಗ್ ರೂಪಿಸಿರುವ ಸ್ವಂತ ಅಪರೇಟಿಂಗ್ ಸಿಸ್ಟಮ್ Bada ಅನ್ನು ಅಳವಡಿಸಲಾಗಿದೆ. ಇತರೆ ಸ್ಮಾರ್ಟ್ ಫೋನ್ ಗಳಲ್ಲಿರುವ ಎಲ್ಲಾ ಸೌಲಭ್ಯಗಳೊಂದಿಗೆ ಸೋಷಿಯಲ್ ನೆಟ್ವರ್ಕಿಂಗ್ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸ್ಯಾಮ್ ಸಂಗ್ ವೇವ್ 525
ಸುಮಾರು 100 ಗ್ರಾಂ ತೂಕವಿರುವ ಮೊಬೈಲ್ ಫೋನ್ ನಲ್ಲಿ 3.15 ಮೆಗಾ ಪಿಕ್ಸಲ್ ಕೆಮೆರಾವಿದೆ. ವೈಫೈ, ಬ್ಲೂಟೂಥ್ ಅಲ್ಲದೆ ಜಿಪಿಎಸ್ ಸೌಲಭ್ಯ ಕೂಡಾ ಇದೆ. ಅಂತರಿಕ ಮೆಮೋರಿ 100 ಎಂಬಿ ಇದ್ದು, ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 16 ಜಿಬಿ ತನಕ ವಿಸ್ತರಿಸಬಹುದಾಗಿದೆ. ವೇವ್ 525 ನ ಬೆಲೆ 8,800 ರು ಮಾತ್ರ.
* 3.2 ಮೆಗಾ ಪಿಕ್ಸಲ್ ಕೆಮೆರಾ, 2048x1536 pixels
* ಸ್ಯಾಮ್ ಸಂಗ್ ಬಾಡಾ 1.1 ಆಪರೇಟಿಂಗ್ ಸಿಸ್ಟಮ್
* ವೈಫೈ 802.11b, 802.11g, 802.11n
* WAP 2.0, HTML ಬ್ರೌಸರ್
* ಬ್ಲೂಟೂಥ್, ವೈ ಫೈ, ಜಿಪಿಎಸ್
* MPEG4, H.263, H.264 ವಿಡಿಯೋ ಪ್ಲೇಯರ್
* ಫೇಸ್ ಬುಕ್, ಟ್ವಿಟ್ಟರ್ ..ಇತ್ಯಾದಿ ಅಪ್ಲಿಕೇಷನ್ ಗಳು
* 3.5mm ಹೆಡ್ ಫೋನ್ ಜಾಕ್
* 200 mAh ಬ್ಯಾಟರಿ
ಸ್ಯಾಮ್ ಸಂಗ್ ವೇವ್ 723
ವೇವ್ 723 ಸ್ಮಾರ್ಟ್ ಮೊಬೈಲ್ ನಲ್ಲಿ 3ಜಿ ಸೌಲಭ್ಯವಿದೆ. 3.2 ಇಂಚಿನ AMOLED TFT ಸ್ಕ್ರೀನ್, 5 ಮೆಗಾ ಪಿಕ್ಸಲ್ ಕೆಮೆರಾ ಜೊತೆಗೆ ಎಲ್ ಇಡಿ ಫ್ಲಾಶ್ ಕೂಡಾ ಇದೆ. ಇದು ಕೂಡಾ ಸ್ಯಾಮ್ ಸಂಗ್ ನ ಸ್ವಂತ ಆಪರೇಟಿಂಗ್ ಸಿಸ್ಟಮ್ ಉಪಯೋಗಿಸುತ್ತದೆ. ಉಳಿದಂತೆ ವೈ ಫೈ, ಜಿಪಿಎಸ್ ಸೇರಿದಂತೆ ಸ್ಮಾರ್ಟ್ ಫೋನ್ ಸೌಲಭ್ಯಗಳಿವೆ.
* 3.2 ಇಂಚು ಸೂಪರ್ AMOLED TFT ಡಿಸ್ಪೇ
* LED ಫ್ಲಾಶ್ ಸಹಿತ 5 ಮೆಗಾ ಪಿಕ್ಸಲ್ ಕೆಮೆರಾ
* ಸ್ಯಾಮ್ ಸಂಗ್ ಬಾಡಾ 1.1 OS
* ಬ್ಲೂಟೂಥ್ 3.0
* 3ಜಿ, ಜಿಪಿಎಸ್, ವೈಫೈ
* ವೈಫೈ 802.11n
* ಸ್ಟೀರಿಯೋ ಎಫ್ ಎಂ ರೇಡಿಯೋ
* 90 ಎಂಬಿ ಅಂತರಿಕ ಮೆಮೋರಿ
* 16 GB ಮೈಕ್ರೋ ಎಸ್ ಡಿ ಬೆಂಬಲ
* ಮೈಕ್ರೋ USB v2.0 ಸಂಪರ್ಕ ಸಾಧ್ಯ
* 200 mAh ಬ್ಯಾಟರಿ
ಸ್ಯಾಮ್ ಸಂಗ್ ವೇವ್ 723 ಬೆಲೆ 13,500 ರು. ಸ್ಯಾಮ್ ಸಂಗ್ ಮಳಿಗೆ ಸೇರಿದಂತೆ ದೇಶದ ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಈ ಮೊಬೈಲ್ ಫೋನ್ ಗಳು ಲಭ್ಯವಿದೆ.











Click it and Unblock the Notifications