ಪ್ರೇಮ ಪ್ರಕರಣ : ಮುಸ್ಲಿಂ ಯುವತಿ ಹತ್ಯೆ

18 ವರ್ಷದ ರೇಹಾನ್ ಪರ್ವಿನ್ ಹತ್ಯೆಗೊಳಗಾದ ನತದೃಷ್ಟೆ. ರೇಹಾನ್ ಪರ್ವಿನ್ ಕಳೆದ ಹಲವಾರು ವರ್ಷಗಳಿಂದ ಹಿಂದು ಜನಾಂಗಕ್ಕೆ ಸೇರಿದ ಭೊರಾ ಪ್ರಜಾಪತಿ(21) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಪ್ರೇಮಿಗಳ ಗ್ರಾಮದ ಹೊರವಲಯದಲ್ಲಿ ನಿತ್ಯ ಭೇಟಿಯಾಗುತ್ತಿದ್ದರು. ವಿಷಯ ತಿಳಿದ ಯುವತಿ ತಂದೆ ಮುಸ್ತಾಕೀಮ್ ಕುಪಿತಗೊಂಡು ಮಗಳು ರೇಹಾನ್ ಳನ್ನು ನೇಣು ಹಾಕಿ ಹತ್ಯೆಗೈದಿದ್ದಾನೆ.
ರೇಹಾನ್ ಕಳೆದ ಮೂರು ದಿನಗಳಿಂದ ಕಾಣಿಯಾಗಿದ್ದರಿಂದ ಪ್ರಜಾಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ತಂದೆ ಮುಸ್ತಾಕೀಮ್ ಮಗಳು ರೇಹಾನ್ ಳನ್ನು ಮನೆಯಲ್ಲಿಯೇ ನೇಣು ಹಾಕಿ ಕೊಲೆ ಮಾಡಿರುವ ಸಂಗತಿ ಹೊರಬಂದಿದೆ.
ಹಿಂದೂ ಸಮಾಜದ ಯುವಕನೊಂದಿಗೆ ಪ್ರೇಮ ಪ್ರೇಮ ಎಂದು ತಿರುಗಾಡುತ್ತಿದ್ದ ಮಗಳಿಗೆ ತಂದೆ ಮಸ್ತಾಕೀಮ್ ಅನೇಕ ಸಲ ತಿಳಿ ಹೇಳಿದ್ದಾನೆ. ಅನ್ಯ ಧರ್ಮಿಯರನ್ನು ಮದುವೆಯಾದರೆ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಬುದ್ಧಿ ಮಾತು ಹೇಳಿದ್ದ. ಆದರೆ, ಮಗಳು ನನ್ನ ಮಾತು ಕೇಳಲಿಲ್ಲವಾದ್ದರಿಂದ ಹತ್ಯೆ ಮಾಡಿರುವುದಾಗಿ ಮುಸ್ತಾಕೀಮ್ ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications