• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋಕಿಯಾ x5 ಮೊಬೈಲ್ ಫೋನ್ ಮಾರುಕಟ್ಟೆ ಪ್ರವೇಶ

By Mahesh
|

ನವದೆಹಲಿ, ನ. 24: ಭಾರತದ ಅಗ್ರಗಣ್ಯ ಮೊಬೈಲ್ ಫೋನ್ ಮಾರಾಟಗಾರರಾದ ನೋಕಿಯಾ ಸಂಸ್ಥೆ, ನೋಕಿಯಾ x5 ಎಂಬ ಸ್ಲೈಡರ್ ಮಾದರಿ ಹೊಸ ಮೊಬೈಲ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. 5 ಮೆಗಾ ಪಿಕ್ಸಲ್ ಕೆಮೆರಾ, 3ಜಿ ಸೌಲಭ್ಯವುಳ್ಳ ಈ ಮೊಬೈಲ್ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ನೋಕಿಯಾ X5 ನಲ್ಲಿ 2.36 ಇಂಚಿನ QVGA ಸ್ಕ್ರೀನ್ ಇದ್ದು, ಪೂರ್ಣವಾಗಿ ಸ್ಲೈಡ್ ಆಗುವ QWERTY ಮಾದರಿ ಕೀಪ್ಯಾಡ್ ಅನುಕೂಲವಿದೆ. ಹಿಂಬದಿಯಲ್ಲಿರುವ 5 ಮೆಗಾ ಪಿಕ್ಸಲ್ ಕೆಮರಾಗೆ LED ಫ್ಯಾಶ್ ಸೌಲಭ್ಯ ಕೂಡಾ ಇದೆ.

ಸಿಂಬಿಯಾನ್ ಸರಣಿಯ 60 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು ARM 11 600 MHz ಪ್ರೊಸಸರ್ ಜೊತೆಗಿದೆ. ಆಂತರಿಕವಾಗಿ 200 ಎಂಬಿ ಮೆಮೋರಿ ಸಾಮರ್ಥ್ಯವಿದ್ದು, 32ಜಿಬಿ ತನಕ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೋರಿ ವಿಸ್ತರಿಸಬಹುದಾಗಿದೆ. ಖರೀದಿ ಸಮಯದಲ್ಲಿ ಮೊಬೈಲ್ ಫೋನ್ ಜೊತೆಗೆ 2 ಜಿಬಿ ಮೆಮೋರಿ ಕಾರ್ಡ್ ಅನ್ನು ನೋಕಿಯಾ ನೀಡುತ್ತಿದೆ.

ಹೊಸ ಅಪ್ಲಿಕೇಷನ್ : ಯುವಕರನ್ನು ಸೆಳೆಯಲು "ಸರ್ಪ್ರೈಜ್ ಮೀ" ಎಂಬ ಅಪ್ಲಿಕೇಷನ್ ನೀಡುತ್ತಿದ್ದು, ಸಂಗೀತ ಪ್ರಿಯರು ಮನಬಂದಂತೆ ಟ್ರ್ಯಾಕ್ ಬದಲಾಯಿಸುತ್ತಾ ಗೀತೆಗಳನ್ನು ಆಲಿಸಬಹುದು. ಉತ್ತಮ ಗುಣಮಟ್ಟದ ಸಂಗೀತ ಆಲಿಸಲು ಎಫ್ ಎಂ ರೇಡಿಯೋ ಕೂಡಾ ಇದೆ. 129 ಗ್ರಾಂ ತೂಕದ ಈ ಮೊಬೈಲ್ ನಲ್ಲಿ ಬ್ಲೂ ಟೂಥ್, ವೈ ಫೈ ಕೂಡಾ ಇದ್ದು, ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ನೋಕಿಯಾ X5 ಮೊಬೈಲ್ ನಲ್ಲಿ ಏನೇನಿದೆ?:

* 2.36 QVGA ಟಿಎಫ್ ಟಿ ಸ್ಕ್ರೀನ್, 320 x 240 pixels

* ಸ್ಲೈಡ್ ಆಗಬಲ್ಲ QWERTY ಕೀಪ್ಯಾಡ್

* ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್ 9.3, Series 60 v3.2 UI

* ARM 11 600 MHz ಪ್ರೊಸೆಸರ್

* 5 ಮೆಗಾ ಪಿಕ್ಸಲ್ ಕೆಮೆರಾ[2592 x 1944 pixels] ಎಲ್ ಇಡಿ ಫ್ಯಾಶ್ ಜೊತೆಗೆ

* ವಿಡಿಯೋ VGA@15fps

* Wi-Fi 802.11 b/g, ಜಿಪಿಆರ್ ಎಸ್,

* ಬ್ಲೂಟೂಥ್ 2.1, EDGE(class 32),

* 3G HSDPA

* ಸ್ಟಿರಿಯೋ ಎಫ್ ಎಂ ರೇಡಿಯೋ

* Li-Ion 950 mAh ಬ್ಯಾಟರಿ

* ಫೇಸ್ ಬುಕ್, ಟ್ವಿಟ್ಟರ್, ಮೈಸ್ಪೇಸ್ ಅಪ್ಲಿಕೇಷನ್

Li-Ion 950 mAh ಬ್ಯಾಟರಿ ಇರುವುದರಿಂದ 384 ಗಂಟೆಗಳ ಸ್ಟಾಂಡ್ ಬೈ ಸಮಯ ಹಾಗೂ ಸುಮಾರು 5 ಗಂಟೆಗಳ ಟಾಕ್ ಟೈಮ್ ಪಡೆಯಬಹುದು. ಹೆಚ್ಚು ಕಾಲಾವಧಿ ಮಾತನಾಡುವವರಿಗೆ ಅನುಕೂಲ ಎಂದು ಸಂಸ್ಥೆ ಹೇಳಿದೆ. ಡಾಕ್ಯುಮೆಂಟ್(ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಪಿಡಿಎಫ್) ವೀಕ್ಷಣೆಗೆ ಅನುಕೂಲವಿದೆ. ಎಂಪಿ4 ಪ್ಲೇಯರ್ ಯಿದ್ದು ಸತತವಾಗಿ 24 ಗಂಟೆಗಳ ಕಾಲ ಹಾಡು ಕೇಳುತ್ತಾ ಕಾಲಕಳೆಯಬಹುದು. ಅಂದ ಹಾಗೆ, ನೋಕಿಯಾ x5 ಮೊಬೈಲ್ ಫೋನ್ ಬೆಲೆ 10,499. ಜಿಪಿಎಸ್, ಟಚ್ ಸ್ಕ್ರೀನ್ ಇಲ್ಲದಿರುವುದು ಈ ಮೊಬೈಲನ್ ನೂನ್ಯತೆ ಎನ್ನಬಹುದು.

English summary
Nokia x5 mobile has has camera at rear has 5 megapixel resolution with LED flash. This is another affordable slider mobile, launched in in India. This Nokia 3G Mobile also gives a a fun application "Surprise me!" that allows users to play random tracks by just spinning their phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X