ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ

By Mahesh
|
Google Oneindia Kannada News

Kadirenahalli Underpass overshoots deadline
ಬೆಂಗಳೂರು, ನ.21: ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ 20 ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ರವೀಂದ್ರ ಹೇಳಿದ್ದಾರೆ. ಗುತ್ತಿಗೆದಾರ ಸಂಸ್ಥೆಯು 18 ತಿಂಗಳಿಗೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದೆ. ಕಾಮಗಾರಿ ವಿಳಂಬವಾಗುವುದಿಲ್ಲ ಎಂದು ರವೀಂದ್ರ ಸ್ಪಷ್ಟಪಡಿಸಿದರು.

ನಗರದ ವಿವಿಧೆಡೆ ಪಾಲಿಕೆ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ರವೀಂದ್ರ, ಈ ಡಿಜಿ ಬಂಕ್ ಬಳಿ ಮೇಲುಸೇತುವೆ ನಿರ್ಮಾಣದಿಂದ ಮೈಸೂರು ರಸ್ತೆ- ಕನಕಪುರ ರಸ್ತೆ ನಡುವಿನ ಸಂಚಾರ ಸುಗಮವಾಗಲಿದೆ ಎಂದರು.

ಕದಿರೇನಹಳ್ಳಿ ಅಂಡರ್ ಪಾಸ್ ಗೆ ಮತ್ತೆ ಗಡವು: ವರ್ಷಾನುಗಟ್ಟಲೇ ಇಂದ ಕುಂಟುತ್ತಾ ಸಾಗುತ್ತಿರುವ ಕದಿರೇನಹಳ್ಳಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯನ್ನು 100 ದಿನದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಇಲ್ಲದಿದ್ದರೆ, ಕಂಟ್ರಾಕ್ಟರ್ ಅನ್ನು ಕಪ್ಪು ಪಟ್ಟಿ(black list)ಗೆ ಸೇರಿಸಲಾಗುವುದು. ಈ ಬಗ್ಗೆ ಮಾಧವ ಹೈಟೆಕ್ ಹಾಗೂ ಜಿಯೋಟೆಕ್ ಸಂಸ್ಥೆಯಿಂಅದ್ ಮುಚ್ಚಳಿಕೆ ಕೂಡಾ ಬರೆಸಿಕೊಳ್ಳಲಾಗಿದೆ ಎಂದು ರವೀಂದ್ರ ಹೇಳಿದರು.

ಮಳೆ ನೀರಿನಿಂದ ಬನಶಂಕರಿ ಮೂರನೆ ಹಂತದ ಕಾಲುವೆ( ಕಾಮಾಕ್ಯ ಚಿತ್ರಮಂದಿರ ಬಳಿ ಇರುವ) ಉಕ್ಕಿ ಹರಿದು, ಜನರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಪರಿಹಾರವಾಗಿ 25 ಕೋಟಿ ರು ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು, ಸೇತುವೆ ಎತ್ತರವನ್ನು ಅಗತ್ಯಕ್ಕಿಂತ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು. ಎನ್ ಆರ್ ಕಾಲೋನಿ ಹಾಗೂ ಪದ್ಮನಾಭ ನಗರಗಳಲ್ಲೂ ಫೈ ಓವರ್ ನಿರ್ಮಿಸುವ ಚಿಂತನೆ ನಡೆದಿದೆ ಎಂದು ರವೀಂದ್ರ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X