ಮಹಿಳೆಯೊಂದಿಗೆ ನ್ಯಾಯಾಧೀಶರ ಲವ್ವಿಡವ್ವಿ

ದೆಹಲಿ ಮೂಲದ ಪುಷ್ಪಾ ಮೀನಾ ಎಂಬುವವರು ದೂರು ಸಲ್ಲಿಸಿದ್ದು, 2005ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಿರುವ ಪ್ರೇಮ್ ಪ್ರಕಾಶ್ ಎಂಬವರು ತನಗೆ ಲೈಂಗಿಕ ಕಿರುಕುಳ ನೀಡಿ ತನ್ನಲ್ಲಿದ್ದ ಎರಡು ಲಕ್ಷ ರುಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
1995ರಲ್ಲಿ ತನಗೆ ಪ್ರೇಮ್ ಪ್ರಕಾಶ್‌ರ ಪರಿಚಯ ಉಂಟಾಯಿತು. ತನ್ನನ್ನು ಮದುವೆಯಾಗುವುದಾಗಿ ನನಗೆ ಆತ ಭರವಸೆ ನೀಡಿದ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದಕ್ಕಾಗಿ ತನ್ನ ಸರಕಾರಿ ಉದ್ಯೋಗದ ಸಂಬಳವನ್ನೂ ಆತ ಪಡೆದುಕೊಳ್ಳುತ್ತಿದ್ದ ಎಂದು ಆರೋಪಿಸಿದ್ದಾರೆ. ಮದುವೆಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಬಿಳಿ ಕಾಗದಗಳಿಗೆ 2004ರಲ್ಲಿ ಸಹಿಯನ್ನೂ ಪಡೆದಿದ್ದ ಎಂದು ಮೀನಾ ದೂರಿನಲ್ಲಿ ತಿಳಿಸಿದ್ದಾರೆ.
ಇದರ ವಿರುದ್ಧ ಪ್ರತಿಭಟಿಸಿದರೆ ಕೊಲ್ಲುವುದಾಗಿಯೂ ಆತ ತನಗೆ ಬೆದರಿಕೆ ಹಾಕಿದ್ದ ಎಂದು ಮೀನಾ ದೂರಿನಲ್ಲಿ ತಿಳಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಜೈಪುರಕ್ಕೆ ವರ್ಗಾವಣೆಯಾಗಿದ್ದು, ಪ್ರತಿಕ್ರಿಯೆಗೆ ಸಿಕ್ಕಿಲ್ಲ.











Click it and Unblock the Notifications