• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಜಿರೆ ಮಲ್ಲಿಗೆ ಪರಿಮಳದ ಹಾದಿ ಹುಡುಕುತ್ತಾ....

By Mahesh
|

ಬೆಳ್ತಂಗಡಿ, ನ.17: ಕಾಲೇಜು ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ದೃಶ್ಯಾವಳಿಗಳಿರುವ 'ಉಜಿರೆ ಮಲ್ಲಿಗೆ" ವೀಡಿಯೋ ಈಗ ಕರಾವಳಿ, ಮಲೆನಾಡು ದಾಟಿ ಬಯಲು ಸೀಮೆಗೂ ಹಬ್ಬಿದೆ. ವಿದ್ಯಾರ್ಥಿನಿಯೊಂದಿಗೆ ಇಬ್ಬರು ಮುಸ್ಲಿಂ ಯುವಕರು, ಓರ್ವ ಹಿಂದೂ ಯುವಕ ನಡೆಸಿರುವ ಅಶ್ಲೀಲ ದೃಶ್ಯಗಳ ವಿಡಿಯೋ ಕ್ಲಿಪ್ಪಿಂಗ್‌ ಎಂಎಂಎಸ್ ರೂಪದಲ್ಲಿ ಮೊಬೈಲ್ ನಿಂದ ಮೊಬೈಲಿಗೆ ಹರಡಿದೆ. ವಿದ್ಯಾರ್ಥಿನಿ ಸೇರಿದಂತೆ ಮೂವರು ಯುವಕರು ನಾಪತ್ತೆಯಾಗಿದ್ದು, ಈ ಕೃತ್ಯಕ್ಕೆ ಸಂಬಂಧಪಡದವರು ಇದರಲ್ಲಿ ತಲೆ ಹಾಕುತ್ತಾ ಸಿಕ್ಕ ಸಿಕ್ಕ ವಿದ್ಯಾರ್ಥಿಗಳಿಗೆ ಕಾಟ ನೀಡುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ವ್ಯಾಪಕವಾಗಿ ಹಬ್ಬಿರುವ ಉಜಿರೆ ಮಲ್ಲಿಗೆ ಪರಿಮಳದ ಜಾಡು ಹಿಡಿಯದೇ, ಧೂಳು ಹಿಡಿದಿರುವ ಪೊಲೀಸ್ ಠಾಣೆಯಲ್ಲೇ ಕೂತಿರುವ ಅಧಿಕಾರಿಗಳು ಒಂದೆಡೆಯಾದರೆ, ವಿಡಿಯೋ ಚಿತ್ರೀಕರಿಸಿದ ವಿದ್ಯಾರ್ಥಿಯ ಶೋಧಕಾರ್ಯದಲ್ಲಿ ತೊಡಗಿರುವ ಅಜ್ಞಾತ ಗುಂಪು ಶಂಕಿತ ವಿದ್ಯಾರ್ಥಿಯೊಬ್ಬನನ್ನು ಅಪಹರಣ ಮಾಡಿ, ನಂತರ ವಾಪಸ್ ಕಳಿಸಿದ್ದಾರೆ.

ಮೊದಲಿಗೆ ಅಪಹರಣ ಕೇಸ್ ಬಗ್ಗೆ: ಉಜಿರೆ, ಬೆಳ್ತಂಗಡಿ ಪರಿಸರದಲ್ಲಿ ಕಳೆದ ವಾರದಿಂದ ಸಂಶಯಾಸ್ಪದವಾಗಿ ಓಡಾಡಿಕೊಂಡಿದ್ದ ಕಪ್ಪು ಬಣ್ಣ ಸ್ಕಾರ್ಪಿಯೋ ವಾಹನ, ಸೋಮವಾರ ಇದ್ದಕ್ಕಿದ್ದಂತೆ ಕಾಲೇಜು ವಿದ್ಯಾರ್ಥಿಯನ್ನು ಹಾಡುಹಗಲೇ ಕಿಡ್ನಾಪ್ ಮಾಡಿದೆ. ಬೆಳ್ತಂಗಡಿ ಕೋರ್ಟ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸ್ಕಾರ್ಪಿಯೋದಲ್ಲಿದ್ದ ಅಜ್ಞಾತ ಗುಂಪು, ಶಂಕಿತ ವಿದ್ಯಾರ್ಥಿಯನ್ನು ಉಜಿರೆ ಮಲ್ಲಿಗೆ ಚಿತ್ರಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ, ತಮಗೆ ಬೇಕಾದ ವಿದ್ಯಾರ್ಥಿ ಇವನಲ್ಲ ಎಂದು ತಿಳಿದ ಮೇಲೆ ಸುರಕ್ಷಿತವಾಗಿ ಆತನನ್ನು ಯಥಾ ಸ್ಥಾನಕ್ಕೆ ಬಿಟ್ಟು ತೆರಳಿದ್ದಾರೆ. ಇಷ್ಟರಲ್ಲಿ ಹುಡುಗನ ಕಡೆಯವರು ಕಿಡ್ನಾಪ್ ವಾಹನ ಹಿಂಬಾಳಿಸಿ ಉಜಿರೆ ಸರ್ಕಲ್ ತನಕ ಬಂದು ಕಾದಿದ್ದಾರೆ. ಸುರಕ್ಷಿತವಾಗಿ ತಮ್ಮ ಮಿತ್ರ ಬಂದು ಸೇರಿದ್ದರಿಂದ ಅಪಹರಣಕಾರರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಹಿಂತಿರುಗಿದ್ದಾರೆ.

ಏನಿದು ಉಜಿರೆ ಮಲ್ಲಿಗೆ?: ಮೈಸೂರು ಮಲ್ಲಿಗೆ ಇದ್ದಂತೆ ಭಟ್ಕಳ, ಪಡುಬಿದ್ರಿ, ಕುಪ್ಪೆಪದವು, ವಾಮಂಜೂರು, ಸುಳ್ಯ, ಮಂಗಳೂರು, ಉಡುಪಿ, ಕುಂದಾಪುರ ಹೀಗೆ ನಾನಾ ಊರುಗಳ ಹೆಸರಿನ ಮಲ್ಲಿಗೆಗಳು(ಸೆಕ್ಸ್ ಕ್ಲಿಪಿಂಗ್ಸ್) ರಾಜ್ಯದೆಲ್ಲೆಡೆ ಹರಡಿದೆ. ಇದಕ್ಕೆ ಹೊಚ್ಚ ಹೊಸ ಸೇರ್ಪಡೆ "ಉಜಿರೆ ಮಲ್ಲಿಗೆ". ನಾಲ್ವರು ವಿದ್ಯಾರ್ಥಿಗಳ ಈ ರಾಸಕ್ರೀಡೆಯ ಕ್ಲಿಪಿಂಗ್ಸ್ ಗೆ ಪಡ್ಡೆಗಳು ಮುಗಿ ಬೀಳುತ್ತಿದ್ದಾರೆ. ಕರಾವಳಿ ಕಡೆ ವಿಡಿಯೋ ಸಿಡಿ ಅಂಗಡಿಗಳಲ್ಲಿ ಅಂಥ ಸಿಡಿಗಾಗಿ ಹೆಚ್ಚೆಚ್ಚು ಹಣ ತೆತ್ತು ಪಡೆಯುತ್ತಿದ್ದಾರೆ.

ಮಲ್ಲಿಗೆ ಘಮಲು ಹರಡಿದವರು ಈಗ ಎಲ್ಲಿದ್ದಾರೆ? : ಉಜಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಹಳೇಪೇಟೆಯ ಹುಡುಗಿ ಜೊತೆ ಕಾಶಿಬೆಟ್ಟು ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಹಾಗೂ ಇತರ ಇಬ್ಬರು ಸೇರಿ ಸಿ.ಡಿ. ತಯಾರಿಸಿರುವುದು ಖಚಿತವಾಗಿದೆ. ಈ ಇಬ್ಬರಲ್ಲಿ ಒಬ್ಬಾತ ಧರ್ಮಸ್ಥಳ ಪರಿಸರದ ಮೀನು ವ್ಯಾಪಾರಿಯೊಬ್ಬನ ತಮ್ಮನಾಗಿದ್ದು, ಇತ್ತೀಚೆಗೆ ವಿದೇಶದಿಂದ ಊರಿಗೆ ಬಂದಿದ್ದ. ಮತ್ತೊಬ್ಬ ರಿಕ್ಷಾ ಚಾಲಕ ಎನ್ನುವುದನ್ನು ಮಲ್ಲಿಗೆ ವೀಕ್ಷಿಸಿದ ಪ್ರತಿಯೊಬ್ಬರೂ ಗುರುತಿಸಿದ್ದಾರೆ.

ಅಸಲಿಗೆ ಸ್ಥಳೀಯ ಠಾಣಾ ಪೊಲೀಸರಿಗೂ ಇವರ ಸಂಪೂರ್ಣ ಜಾತಕ ತಿಳಿದಿದೆ. ಹಾಗಿದ್ದೂ ಪೊಲೀಸರು ಆರೋಪಿಗಳು ಹಾಗೂ ಮಲ್ಲಿಗೆಯಲ್ಲಿ ತನ್ನ ಸಕಲವನ್ನೂ ತೆರೆದಿಟ್ಟ ಮುಂಬೈ ಹೋಟೆಲ್ ಉದ್ಯೋಗಿಯ ಮಗಳು ತಲೆ ತಪ್ಪಿಸಿಕೊಳ್ಳಲು ಬಿಟ್ಟಿದ್ದೇಕೆ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು. ಪೊಲೀಸರಿಗೆ ಈ ಬಗ್ಗೆ ಮೊದಲೇ ಮಾಹಿತಿಯಿದ್ದು, ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿರಬಹುದು ಎಂದು ಸಂಶಯ ತಾಳಿರುವ ಸ್ಥಳೀಯ ನಿವಾಸಿಗಳು ಇಲಾಖೆಯ ದಕ್ಷ ಅಧಿಕಾರಿಗಳಾದರೂ ಸಾರ್ವಜನಿಕ ಹಿತದೃಷ್ಟಿಯ ಆಧಾರದಲ್ಲಿ ಸ್ವಯಂಪ್ರೇರಿತರಾಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲಿ ಎಂದು ಒತ್ತಾಯಿಸಿದ್ದಾರೆ.

ಉಜಿರೆ ಪರಿಸರದ ಯುವತಿ ಹಾಗೂ ಸ್ಥಳೀಯ ಮನೆಗಳ ಮೂವರು ಯುವಕರು ಸೆಕ್ಸ್ ಸಿ.ಡಿ.ಯಲ್ಲಿ ಪಾಲ್ಗೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲೆಯ ವಿವಿಧ ಭಾಗಗಳ ಹಿಂದೂ ಸಂಘಟನೆಗಳು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ. ಪ್ರಕರಣದ ತನಿಖೆ ನಡೆಸದೆ, ದೂರು ದಾಖಲಾಗಿಲ್ಲ ಎಂದು ಸಬೂಬು ಹೇಳುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

ಸೆಲ್ ಫೋನ್‌ನಲ್ಲಿ ಈ ದೃಶ್ಯಾವಳಿಗಳು ಹೊರಜಗತ್ತಿಗೆ ತೆರೆದು ಕೊಳ್ಳುತ್ತಿದ್ದಂತೆ ಪ್ರಕರಣದಲ್ಲಿ ಭಾಗಿಯೆನ್ನಲಾದ ಯುವಕರು ತಲೆಮರೆಸಿಕೊಂಡಿದ್ದಾರೆ. ಯುವತಿಯನ್ನು ಆಕೆಯ ತಂದೆ ತಾಯಿ ಇರುವ ಮುಂಬಯಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿರುವ ಯುವತಿಗೆ ಸಂಬಂಧಪಟ್ಟವರು ಸುಮ್ಮನಿದ್ದರೂ ಇನ್ಯಾರೋ ಸಂಬಂಧ ಪಡದವರು ತಲೆಕೆಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಅಮಾಯಕರನ್ನು ಬಲಿಪಶು ಮಾಡದೆ, ಸಂಬಂಧ ಪಟ್ಟವರನ್ನು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡರೆ ಮುಂಬರುವ ಸಂಭಾವ್ಯ ಅನಾಹುತಗಳನ್ನು ತಪ್ಪಿಸಬಹುದೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Ujire Mallige" Sex Scandal MMS invovling sensual scenes of a college girl with three guys is creating havoc in Dakshina Kannada district. On one hand victim"s family is keeping mum, on the other hand unknown persons are active and kidnapped a student alleging him that he shot the entire mallige episode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more