ರೋಗಿ ಕಿಡ್ನಿಯಿಂದ ಲಕ್ಷಾಂತರ ಕಲ್ಲುಗಳು ಹೊರಕ್ಕೆ!

ಶಾಹದ ನಗರದಲ್ಲಿ ವಿಳ್ಯದೆಲೆ ಅಂಗಡಿ ವ್ಯಾಪಾರಿಯಾದ 45ರ ಹರೆಯದ ವಡಿಲೆ ತೇಜನಾಕ್ಷ ಹೆಲ್ತ್‌ಕೇರ್ ಆಸ್ಪತ್ರೆಗೆ ಭೇಟಿ ನೀಡುವ ಮೊದಲ 6 ತಿಂಗಳಿನಿಂದ ನೋವಿನಿಂದ ಬಳಲುತ್ತಿದ್ದರು. ''ವಡಿಲೆಗೆ ಕೆಳ ಹೊಟ್ಟೆಯಲ್ಲಿ ತೀವ್ರ ನೋವಿತ್ತು. ಆತ ಹಲವಾರು ವೈದ್ಯರನ್ನು ಭೇಟಿಯಾಗಿದ್ದ ಮತ್ತು ಔಷಧಿಗಳನ್ನು ತೆಗೆದುಕೊಂಡಿದ್ದ. ಆದರೆ ಆತನಿಗೆ ಪರಿಹಾರ ಲಭ್ಯವಾಗಿರಲಿಲ್ಲ. ವಡಿಲೆಯ ಎಡ ಕಿಡ್ನಿಯಲ್ಲಿ ತೊಂದರೆಯಿರುವುದನ್ನು ನಾವು ಪತ್ತೆ ಹಚ್ಚಿದೆವು"" ಎಂದು ರವಾಂಡಲೆ ಹೇಳಿದ್ದಾರೆ.
ನಾಲ್ಕು ಗಂಟೆಗಳವರೆಗೆ ನಡೆದ ಶಸ್ತ್ರಕ್ರಿಯೆಯ ಬಳಿಕ ವಡಿಲೆಯವರ ಕಿಡ್ನಿಯಲ್ಲಿ ಪತ್ತೆಯಾದ ಕಿಡ್ನಿಕಲ್ಲುಗಳ ಸಂಖ್ಯೆಯನ್ನು ನನ್ನೊಂದಿಗೆ ಶಸ್ತ್ರಕ್ರಿಯೆಗೆ ಸಹಕರಿಸಿದ ವೈದ್ಯರೇ ನಂಬುವ ಸ್ಥಿತಿಯಲ್ಲಿರಲಿಲ್ಲ. ಸ್ಪಷ್ಟವಾಗಿ ಕಲ್ಲುಗಳ ಸಂಖ್ಯೆಯನ್ನು ಲೆಕ್ಕ ಹಾಕುವುದೇ ದೊಡ್ಡ ಕೆಲಸವಾಗಿ ಹೋಗಿತ್ತು. ಅದಕ್ಕಾಗಿ ತಾವು ವಜ್ರದ ಹರಳುಗಳನ್ನು ಲೆಕ್ಕ ಮಾಡುವ ವಜ್ರದ ಕೆಲಸಗಾರರನ್ನು ಕರೆಸಿದೆವು ಮತ್ತು ವೈದ್ಯರನ್ನೂ ಇಟ್ಟುಕೊಂಡಿದ್ದೆವು ಎಂದು ರವಂಡಾಲೆ ತಿಳಿಸಿದ್ದಾರೆ.
''ಬಳಿಕ ನಾನು ಗಿನ್ನೆಸ್ ಜಾಗತಿಕ ದಾಖಲೆ ಸಂಸ್ಥೆಗೆ ಪತ್ರ ಬರೆದೆ, ಅವರು ಕಲ್ಲುಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸುವಂತೆ ಸೂಚಿಸಿದರು. ಅದನ್ನು ಪರಿಶೀಲಿಸಿದ ಅವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಈ ಕುರಿತ ದೃಢೀಕರಣ ಪತ್ರ ಕಳಿಸಿ ನಾನು ದಾಖಲೆ ನಿರ್ಮಿಸಿರುವುದಾಗಿ ತಿಳಿಸಿದ್ದಾರೆ"" ಎಂದು ವೈದ್ಯ ಅಶೀಶ್ ಖುಷಿಯಿಂದ ಹೇಳುತ್ತಾರೆ.












Click it and Unblock the Notifications