• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೋಸ್ಟ್ ಆಫೀಸ್ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವೇಕೆ ?

By * ಕೆ. ವಿನಾಯಕ ಶೆಣೈ, ಕೊಡಿಯಲ್ ಬೈಲ್
|
ಉಡುಪಿ, ನ.15: ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಹೆಚ್ಚುತ್ತಲೇ ಹೋಗುತ್ತಿದೆ. ಆದರೂ ಜನರಿಗೆ ಬಂಗಾರದ ಮೋಹ ಬಿಟ್ಟಿಲ್ಲ. ಬಂಗಾರದ ಅಂಗಡಿಗಳಲ್ಲಿ ಹಬ್ಬದ ಸಮಯದಲ್ಲಿ ಕೊಂಡುಕೊಳ್ಳುವವ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಈ ರೀತಿ ಬಂಗಾರವನ್ನು ಕೊಳ್ಳುವಾಗ ಜನ ಎಲ್ಲಿ ಮೋಸ ಹೋಗುತ್ತಾರೆ ಎಂಬುದು ತಿಳಿಯುವುದಿಲ್ಲ. ಆದರೆ ಒಂದು ಮುಖ್ಯ ಹಾಗೂ ಆಶ್ಚರ್ಯದ ಸಂಗತಿಯನ್ನು ಇಲ್ಲಿ ತಿಳಿಸಲು ಬಯಸುತ್ತೇನೆ. ನಗರದಲ್ಲಿ ನೂರಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಅನೇಕ ಬಂಗಾರದ ಅಂಗಡಿಗಳಿವೆ. ಸಾಮಾನ್ಯ ಜನ ತಮಗೆ ನಂಬಿಕೆ ಇರುವ ಕಡೆ ವ್ಯಾಪಾರ ಮಾಡುತ್ತಾರೆ.

ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲೂ ಬಂಗಾರದ ಬೆಲೆ ಆವತ್ತಿನ ಮಟ್ಟಿಗೆ ಒಂದೇ ಆಗಿರುತ್ತದೆ. ಆ ದಿನಕ್ಕೆ ಇಂಟರ್‌ನ್ಯಾಷನಲ್ ಬೆಲೆ ಎಷ್ಟಿರುತ್ತದೋ ಅದರಂತೆ 22 ಕ್ಯಾರೆಟ್ (ಆಭರಣ ಚಿನ್ನ) ಚಿನ್ನ ಮತ್ತು ಶುದ್ಧ 24 ಕ್ಯಾರೆಟ್ ಚಿನ್ನಕ್ಕೆ ಬೆಲೆನಿಗದಿಯಾಗಿರುತ್ತದೆ. ಅದರಂತೆ ಪತ್ರಿಕೆಗಳಲ್ಲೂ ಚಿನ್ನದ ಬೆಲೆಯನ್ನು ಹಾಕಿರುತ್ತಾರೆ. ಈಗ ಪೋಸ್ಟ್ ಆಫೀಸಿನಲ್ಲೂ ಚಿನ್ನದ ನಾಣ್ಯ ದೊರೆಯುತ್ತದೆ. ಅವರು ಈಗ ನಿರ್ದಿಷ್ಟ ದಿನದವರೆಗೆ 10 ಗ್ರಾಂ ಚಿನ್ನ ಕೊಂಡರೆ ಅರ್ಧ ಗ್ರಾಂ ಚಿನ್ನ ಉಚಿತವಾಗಿ ಕೊಡುತ್ತೇವೆಂದು ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಈ ಸ್ಕೀಮ್ ಲಾಭ ಪಡೆಯಬೇಕಾದರೆ 5 ಗ್ರಾಂನ ಎರಡು ನಾಣ್ಯ ಅಥವಾ 8 ಗ್ರಾಂನ ಒಂದು ನಾಣ್ಯ ಅಥವಾ 1 ಗ್ರಾಂನ ಎರಡು ನಾಣ್ಯವನ್ನಾದರೂ ಖರೀದಿಸಲೇಬೇಕು. ಪೋಸ್ಟ್ ಆಫೀಸ್ ನಲ್ಲಿ ಒಂದು ಗ್ರಾಂ, ಐದು ಗ್ರಾಂ, ಮತ್ತು ಎಂಟು ಗ್ರಾಂ ಈ ಪ್ರಮಾಣದ ಚಿನ್ನದ ನಾಣ್ಯ ಮಾರಾಟಕ್ಕೆ ಲಭ್ಯವಿರುತ್ತದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಂಗಡಿಗಳಲ್ಲಿ ಇರುವ ಒಂದು ಗ್ರಾಂ ಚಿನ್ನದ ಬೆಲೆಗೂ ಪೋಸ್ಟ್ ಆಫೀಸಿಗೂ ಸುಮಾರು 500 ರೂಪಾಯಿ ವ್ಯತ್ಯಾಸವಿದೆ. ಇದು ಯಾಕೆ ಹೀಗೆ ಕೇಳಿದರೆ ಇದು ಸ್ವಿಸ್ ಬಂಗಾರ(Valcambi Switzerland), ಶೇಕಡ 99.9 ಶುದ್ಧ ಇರುತ್ತದೆ ಎಂದು ಏನೇನೂ ಹೇಳುತ್ತಾರೆ. ಬಂಗಾರದ ಅಂಗಡಿಗಳಲ್ಲಿ ಈ ಬೆಲೆ ಇದೆ ಎಂದು ಹೇಳಿದರೆ "ಅದು ನಮಗೆ ಗೊತ್ತಿಲ್ಲ. ನಮಗೆ ಮೇಲಿನವರಿಂದ ಬಂದಿರುವಂತೆ ಮಾರುತ್ತೇವೆ" ಎನ್ನುತ್ತಾರೆ.

ಹಾಗಾದರೆ ಒಂದೇ ತೂಕ ಒಂದೇ ಪರಿಶುದ್ಧತೆ ಇರುವ ವಸ್ತು ಇಷ್ಟು ವ್ಯತ್ಯಾಸ ಇರಲು ಹೇಗೆ ಸಾಧ್ಯ? ಅಂದರೆ ಅಂಗಡಿಯಲ್ಲಿ ಮಾರುವ ಚಿನ್ನ ಕಡಿಮೆ ಶುದ್ಧತೆ ಎಂದು ತಿಳಿಯಬೇಕೆ? ಇಲ್ಲ ಪೋಸ್ಟ್ ಆಫೀಸ್ ನಲ್ಲಿ ಮಾರುವ ಚಿನ್ನದ ಬೆಲೆ ಹೆಚ್ಚೆಂದು ತಿಳಿಯಬೇಕೆ? ಯಾವುದಾದರೊಂದು ಸರಿಯಾಗಿಲ್ಲವೆಂದರೆ ಜನರಿಗೆ ಮೋಸ ಮಾಡಿದಂತಾಗುವುದಿಲ್ಲವೇ? ಇದನ್ನು ಸಂಬಂಧಪಟ್ಟವರು ಗಮನಿಸಿ ಯಾವುದು ಸರಿ ಎಂಬುದನ್ನು ನಿರ್ಧರಿಸಿ. ಇದರ ಬಗ್ಗೆ ಸರ್ಕಾರ ಗಮನಹರಿಸಿ ಜನರ ಸಹಾಯಕ್ಕೆ ಬರಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The gold coins of weight 0.5 gm, 1 gm, 5 gm and 8 gm are available in post offices. These gold coins are manufactured by Valcambi Switzerland and are 99.99 per cent pure. But it is found that the gold rate is higher than the one sold in market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more