ಟಾಟಾ ಗೋಲ್ಡ್ ಪ್ಲಸ್ ನಿಂದ ಚಿನ್ನದ ನ್ಯಾನೋ
ಬೆಂಗಳೂರು,
ನ. 11 : ಟೈಟಾನ್ ಇಂಡಸ್ಟ್ರೀಸ್ ನ ಆಭರಣ ಬ್ರ್ಯಾಂಡ್ ಟಾಟಾ ಗೋಲ್ಡ್ ಪ್ಲಸ್ ಚಿನ್ನದ ನ್ಯಾನೋದೊಂದಿಗೆ ದೇಶಿಯ ಆಭರಣ ಉದ್ಯಮದ 5000 ವರ್ಷಗಳ ಸಂಭ್ರಮ ಆಚರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಗೋಲ್ಡ್ ಪ್ಲಸ್ ನ್ಯಾನೋ ಆಂದೋಲನ ಆರಂಭಿಸಿದ್ದು, ಮೂರು ನ್ಯಾನೋ ವಿನ್ಯಾಸಗಳನ್ನು ಸಾರ್ವಜನಿಕ ಮತಕ್ಕಾಗಿ ಮುಂದಿಟ್ಟಿದೆ. id="toptextpromo">ಟೈಟಾನ್
ಇಂಡಸ್ಟ್ರೀಸ್ ಆಭರಣ ವಿಭಾಗದ ಸಿಒಒ ಸಿಕೆ ವೆಂಕಟರಾಮನ್ ಗೋಲ್ಡ್ ಪ್ಲಸ್ ನ್ಯಾನೋ ಆಂದೋಲನಕ್ಕೆ ಚಾಲನೆ ನೀಡಿದರು. ನಟಿ ರಮ್ಯಾಕೃಷ್ಣ ಒಂದು ವಿನ್ಯಾಸಕ್ಕೆ ಮತ ಚಲಾಯಿಸುವ ಮೂಲಕ ಮತ ಸಂಗ್ರಹಣೆಗೆ ಚಾಲನೆ ನೀಡಿದರು. ಸಾರ್ವಜನಿಕರು ಎಸ್ಎಂಎಸ್, ಉಚಿತ ಸಂಖ್ಯೆಗೆ ಕರೆ, ಗೋಲ್ಡ್ ಪ್ಲಸ್ ನ್ಯಾನೋ ಅಂತರ್ಜಾಲ ತಾಣ, ಸಾರ್ವಜನಿಕ ನೆಟ್ ವರ್ಕ್ ಗಳಿಗೆ ಭೇಟಿ ನೀಡಿ ಮತ ಚಲಾಯಿಸಬಹುದು. id='are-slot-1' class='oiad oi-axt oiadv'> id='top-searched-articles'>ಹತ್ತಿರದ
ಗೋಲ್ಡ್ ಪ್ಲಸ್ ಮಳಿಗೆಗೆ ಭೇಟಿ ನೀಡಿ ಮತ ಚಲಾಯಿಸಬಹುದು. 100 ಚಿನ್ನದ ನಾಣ್ಯಗಳು, 25 ಪದಕಗಳು, ಕೀ ಚೈನ್ ಗಳು ಸೇರಿದಂತೆ 40 ಲಕ್ಷ ರುಪಾಯಿ ಮೌಲ್ಯದ ಬಹುಮಾನವಿದೆ. ನಿಮ್ಮ ನೆಚ್ಚಿನ ವಿನ್ಯಾಸದ ಆಯ್ಕೆಗಾಗಿ ತಾಣಕ್ಕೆ ಭೇಟಿ ನೀಡಬಹುದು. 1800 102 3332 ಉಚಿತ ಕರೆ ಮಾಡಬಹುದು. ಕಾರಿನ ಹೆಸರನ್ನು 56070ಕ್ಕೆ ಸಂದೇಶ ಕಳುಹಿಸಬಹುದು.











Click it and Unblock the Notifications