ಅಮನ್ ರ‌್ಯಾಗಿಂಗ್ ಕೇಸ್ : ತಪ್ಪಿತಸ್ಥರಿಗೆ 4 ವರ್ಷ ಶಿಕ್ಷೆ
ಧರ್ಮಶಾಲಾ,
ಹಿಮಾಚಲ ಪ್ರದೇಶ), ನ.11: ರ‌್ಯಾಗಿಂಗ್ ಪೀಡಿಗಿಗೆ ಸಿಕ್ಕು ಪ್ರಾಣತೆತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಅಮನ್ ಖಚ್ರೋ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಅಮನ್ ಅನ್ನು ಸಾವಿಗೆ ದೂಡಿದ ನಾಲ್ವರು ಆರೋಪಿ ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳನ್ನು ತಪ್ಪಿತಸ್ಥರು ಎಂದು ಸೆಷನ್ ನ್ಯಾಯಾಲಯ ತೀರ್ಪಿತ್ತಿದೆ. id="toptextpromo">ಐಪಿಸಿ
ಸೆಕ್ಷನ್ 304 II,452, 34ರ ಅನ್ವಯ ನಾಲ್ವರು ವಿದ್ಯಾರ್ಥಿಗಳನ್ನು ತಪ್ಪಿತಸ್ಥರು ಎಂದು ನ್ಯಾಯಮೂರ್ತಿ ಪುರಿಂದರ್ ವೈದ್ಯ ಘೋಷಿಸಿದರು.ತಪ್ಪಿತಸ್ಥರಿಗೆ 10 ಸಾವಿರ ರು.ಗಳ ದಂಡ ಹಾಗೂ ನಾಲ್ಕು ವರ್ಷದ ಶಿಕ್ಷೆ ಪ್ರಕಟಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ರಾಜೇಂದ್ರ
ಪ್ರಸಾದ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಓದುತ್ತಿದ್ದ ದೆಹಲಿ ಮೂಲದ ಅಮನ್ ಖಚ್ರೋ(19) ನನ್ನು ರ‌್ಯಾಗಿಂಗ್ ಬಲೆಗೆ ಬೀಳಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳು ತೀವ್ರವಾಗಿ ಹೊಡೆದಿದ್ದರು. ಕುಡಿದ ಮತ್ತಿನಲ್ಲಿ ಅಜಯ್ ವರ್ಮಾ, ನವೀನ್ ವರ್ಮಾ, ಅಭಿನವ್ ವರ್ಮಾ ಹಾಗೂ ಮುಕುಲ್ ಶರ್ಮ ಎಂಬ ವಿದ್ಯಾರ್ಥಿಗಳು ಎಸೆಗಿದ ಈ ಕೃತ್ಯದಿಂದ ತೀವ್ರವಾಗಿ ಗಾಯಗೊಂಡಿದ್ದ ಅಮನ್ ಚೇತರಿಸಿಕೊಳ್ಳಲಾಗದೆ ಮಾರ್ಚ್ 8, 2009ರಲ್ಲಿ ಮೃತನಾಗಿದ್ದ. ಅಮನ್ ನನ್ನು ಕೊಂದವರಿಗೆ ಪ್ರಕಟಿಸಿರುವ ಶಿಕ್ಷೆ ಪ್ರಮಾಣ ಬೇಸರ ತಂದಿದೆ. ಇದು ನ್ಯಾಯಯುತವಾದ ತೀರ್ಪಲ್ಲ ಎಂದು ಅಮನ್ ತಂದೆ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications