ಫೈರ್ ಫಾಕ್ಸ್ ನೂರ್ಕಾಲ ಚೆನ್ನಾಗಿ ಬಳಕೆಯಾಗಲಿ

ಓಪನ್ ಸೋರ್ಸ್ ವೆಬ್ ಬ್ರೌಸರ್ ಫೈರ್ ಫಾಕ್ಸ್ ಅನ್ನು ವಿಶ್ವದಾದ್ಯಂತ ಕನಿಷ್ಠವೆಂದರೂ ಸುಮಾರು 400 ಮಿಲಿಯನ್ ಜನ ಬಳಸುತ್ತಿದ್ದಾರೆ. ಸುಮಾರು 70 ಭಾಷೆಗಳಲ್ಲಿ ಲಭ್ಯವಿದೆ. ಬ್ರೌಸರ್ ನಲ್ಲಿ ಹೊಸ ವಿನ್ಯಾಸ, ಸುರಕ್ಷತೆ, ಗ್ರಾಹಕ ಸ್ನೇಹಿ ಆಡ್ ಆನ್ ಗಳನ್ನು ನೀಡುವ ಮೂಲಕ ಜನಮನಗೆದ್ದಿದೆ.
ಹೊಸತನದ ಅನ್ವೇಷಣೆಯಲ್ಲಿರುವ ಉತ್ಸಾಹಿ ತಂತ್ರಜ್ಞರ ದೊಡ್ಡ ಪಡೆಯನ್ನೇ ಹೊಂದಿರುವ ಮೊಝಿಲ್ಲಾ ಸಮುದಾಯ, ಎಪಿಕ್ ಬ್ರೌಸರ್ ನಂತಹ ಪ್ರಾದೇಶಿಕ ಚಿಂತನೆ ಹಾಗೂ ಸ್ಥಳೀಯ ಅಭಿರುಚಿ ಅನುಗುಣವಾದ ಬ್ರೌಸರ್ ಅಭಿವೃದ್ಧಿಗೂ ಸಹಕಾರಿಯಾಗಿದೆ.
ಫೈರ್ ಫಾಕ್ಸ್ ಮಾರುಕಟ್ಟೆಗೆ ಪ್ರವೇಶಿಸಿದಾಗ, ಮೈಕ್ರೋಸಾಫ್ಟ್ ನ ಇಂಟರ್ ನೆಟ್ ಎಕ್ಸ್ ಪ್ಲೋರರ್ ನದ್ದೇ ಕಾರುಬಾರು. ನಂತರ ನೆಟ್ ಸ್ಕೇಪ್ ನ್ಯಾವಿಗೇಟರ್ ಪತನ ನಂತರ ಎಲ್ಲೆಡೆ ಐಇ ಬ್ರೌಸರ್ ಗಳೇ ಕಾಣಿಸತೊಡಗಿದ್ದವು. ಆದರೆ, ಐಇಯಲ್ಲಿರುವ ಲೋಪ ದೋಷಗಳನ್ನು ಅರಿತ ಫೈರ್ ಫಾಕ್ಸ್ ವಿಭಿನ್ನ ಬಗೆಯ ಬ್ರೌಸರ್ ಅನ್ನು ಪರಿಚಯಿಸಿ ಗ್ರಾಹಕರ ಮನಗೆದ್ದುಬಿಟ್ಟಿತು. ಸದ್ಯ ಫೈರ್ ಫಾಕ್ಸ್ 4 ರ ಬೀಟಾ ಆವೃತ್ತಿ ಲಭ್ಯವಿದ್ದು, ಶೀಘ್ರದಲ್ಲೆ ಪೂರ್ಣ ಪ್ರಮಾಣದಲ್ಲಿ ಹೊರಬರಲಿದೆ.
HTML5 ಬೆಂಬಲ, ಫ್ಲಾಶ್, ಸ್ಪಾಮ್, ವೈರಸ್ ನಿಂದ ಸುರಕ್ಷತೆ, ಅಸಂಖ್ಯ ಪ್ಲಗ್ ಇನ್ ಗಳು, ಆಡ್ ಆನ್ ಗಳು, ಗೂಗಲ್ ಅಲ್ಲದೆ ಬಿಂಗ್ ಕೂಡಾ ಸರ್ಚ್ ಸೌಲಭ್ಯ ಅಳವಡಿಕೆ ಹೀಗೆ ಅನೇಕ ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಒಟ್ಟಿನಲ್ಲಿ ಗ್ರಾಹಕರ ಬ್ರೌಸಿಂಗ್ ಮಿಡಿತ ಅರಿತಿರುವ ಮೊಝಿಲ್ಲಾಗೆ ಶುಭ ಹಾರೈಕೆಗಳು.











Click it and Unblock the Notifications